ಮoಜೇಶ್ವರ: ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಇದರ ವತಿಯಿಂದ ಸಂತೋಷ್ ಫ್ರೆಂಡ್ಸ್ ಕ್ಲಬ್ ಲೈಬ್ರೆರಿ, ಪಾವಳ ವರ್ಕಾಡಿ ಇವರ ಸಹಯೋಗದೊಂದಿಗೆ ವನಿತೋತ್ಸವ 2023-24 ಕಾರ್ಯಕ್ರಮ 9-3-2024 ರಂದು ಬೆಳಿಗ್ಗೆ ೯ರಿಂದ ಕಳಿಯೂರು ಸೈಂಟ್ ಜೋಸೆಫ್ ಎ.ಯು.ಪಿ ಶಾಲೆಯಲ್ಲಿ ನಡೆಯಲಿದೆ. ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಅಧ್ಯಕ್ಷ ಕೆ.ಅಬ್ದುಲ್ಲ ಅಧ್ಯಕ್ಷತೆ ವಹಿಸುವರು. ವರ್ಕಾಡಿ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್ ಉದ್ಘಾಟಿಸುವರು. ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ.ಕೆ ಮುಖ್ಯ ಅತಿಥಿಯಾಗಿರುವರು.
ರಾಜ್ಯ ಲೈಬ್ರೆರಿ ಕೌನ್ಸಿಲ್ ಸದಸ್ಯ ಅಹಮ್ಮದ್ ಹುಸೈನ್.ಪಿಕೆ, ವರ್ಕಾಡಿ ಆರೋಗ್ಯ ಮತ್ತು ವಿಧ್ಯಾಭ್ಯಾಸ ಸ್ಥಾಯೀ ಸಮಿತಿ ಚಯರ್ಪರ್ಸನ್ ಮಮತಾ, ಕಳಿಯೂರು ಸೈಂಟ್ ಜೋಸೆಫ್ ಎ.ಯು.ಪಿ ಶಾಲಾ ಮುಖ್ಯೋಪಧ್ಯಾಯಿನಿ ಪುಷ್ಪಾವತಿ, ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್, ವರ್ಕಾಡಿ ಪಂಚಾಯತ್ ಸಂಚಾಲಕ ವಿಜಯ ಕುಮಾರ್ ಪಾವಳ, ಸಂತೋಷ್ ಪ್ರೆಂಡ್ಸ್ ಕ್ಲಬ್ ಲೈಬ್ರೆರಿ ಪಾವಳ ಇದರ್ ಅಧ್ಯಕ್ಷ ಬಾಲಕೄಷ್ಣ ಶೆಟ್ಟಿ ಪಾವಳ ಉಪಸ್ಥಿತರಿರುವರು. ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಲೈಬ್ರೆರಿ ಕೌನ್ಸಿಲ್ ಮತ್ತು ಜಿಲ್ಲಾ ಪಂಚಾಯತ್ ಸದಸ್ಯೆ ಜಮೀಲ ಸಿದ್ದಿಕ್ ಅಧ್ಯಕ್ಷತೆ ವಹಿಸುವರು.
ಕಳಿಯೂರು ಸೈಂಟ್ ಜೋಸೆಫ್ ಎ.ಯು.ಪಿ ಶಾಲೆಯ ರೆವ್ಯೂ ಫಾದರ್ ಬಸೀಲ್ ವಾಸ್ ಉದ್ಘಾಟಿಸುವರು. ವರ್ಕಾಡಿ ಪಂಚಾಯತ್ ಉಪಾಧ್ಯಾಕ್ಷ ಅಬೂಬಕ್ಕರ್ ಸಿದ್ದಿಕ್.ಪಿ, ವರ್ಕಾಡಿ ಸಿಡಿಎಸ್ ಚಯರ್ ಪರ್ಸನ್ ವಿಜಯಲಕ್ಷಿ, ಜಿಲ್ಲಾ ಲೈಬ್ರೆರಿ ಕೌನ್ಸಿಲ್ ಸದಸ್ಯೆ ವನಿತಾ ಆರ್.ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.