ಉಡುಪಿ: ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಉಡುಪಿಯಲ್ಲಿ ಮಹಿಳಾ ದೌರ್ಜನ್ಯ ವಿರುದ್ಧ ಜಾಥಾ ಹಮ್ಮಿಕೊಂಡಿತು. ಅಜ್ಜರಕಾಡು ಹುತಾತ್ಮ ವೇದಿಕೆ ಬಳಿಯಿಂದ ಆರಂಭವಾದ ಕಾಲ್ನಡಿಗೆ, ಕೋರ್ಟ್ ರಸ್ತೆ ಕೆ.ಎಂ ಮಾರ್ಗ, ಸರ್ವಿಸ್ ಬಸ್ ನಿಲ್ದಾಣ, ನಗರ ಠಾಣೆ ಮಿಷನ್ ಕಂಪೌಂಡ್ ಮೂಲಕ ಸಾಗಿತು.
ಸುಮಾರು 2,000 ಜನ ಮಹಿಳೆಯರು ಹಕ್ಕೊತ್ತಾಯ ಜಾಥಾದಲ್ಲಿ ಭಾಗಿಯಾದರು. ಮಹಿಳೆಯರ ಮೇಲೆ ದೌರ್ಜನ್ಯ ನಿಲ್ಲಬೇಕು, ಸಮಾನತೆ ಜಾರಿಗೆ ಬರಬೇಕು, ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಹಕ್ಕು ಸಿಗಬೇಕು ಎಂದು ಒತ್ತಾಯಿಸಲಾಯಿತು. ಬಂಡಾಯದ ಹಾಡು, ಹಕ್ಕೊತ್ತಾಯದ ಸ್ಲೋಗನ್ ಗಳ ಮೂಲಕ ಮಹಿಳೆಯರು ಕುಣಿದು, ಕುಪ್ಪಳಿಸಿ ಹಕ್ಕೊತ್ತಾಯ ಜಾಥಾದಲ್ಲಿ ಭಾಗಿಯಾದರು.