ಪೆರ್ಮುದೆ: ಕೇರಳ ಸರಕಾರದ ಮಾಜಿ ಆರೋಗ್ಯ ಸಚಿವೆ ಹಾಗೂ ಸಿಪಿಎಂ ಕೇಂದ್ರ ಸಮಿತಿಯ ಸದಸ್ಯೆಯಾದ ಟೀಚರ್ ಕೆಎಸ್‌ಟಿಎ ಅಧ್ಯಾಪಕ ಸಂಘಟನೆಯ ಮಂಜೇಶ್ವರ ಉಪಜಿಲ್ಲಾ ಕಮಿಟಿ ನಿರ್ಮಿಸಿದ ಮನೆಯ ಕೀಲಿಕೈಯನ್ನು ಮಗುವಿಗೆ ಹಸ್ತಾಂತರಿಸಿದರು. ಕೇರಳ ತುಳು ಅಕಾಡೆಮಿ ಚಯರ್ ಮೇನ್ ಆದ ಕೆ.ಆರ್ ಜಯಾನಂದ ಅಧ್ಯಕ್ಷತೆ ವಹಿಸಿದ್ದರು.
ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಕುಡಲ್ ಮೇರ್ಕಳ, ಇಲ್ಲಿ ಕಲಿಯುತ್ತಿರುವ ಮೂರು ಹೆಣ್ಣು ಮಕ್ಕಳಿರುವ ತೀರಾ ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಹಸ್ತಾಂತರ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮನೆ ನಿರ್ಮಾಣ ಕಮಿಟಿಯ ಕನ್ವೀನರ್ ಹಾಗೂ ಕೆ ಎಸ್ ಟಿ ಎ ಜಿಲ್ಲಾ ಕಾರ್ಯಕಾರಿಸಮಿತಿ ಸದಸ್ಯರಾದ ಮೋಹನ ಬಿ ಸ್ವಾಗತಿಸಿ, ಉಪಜಿಲ್ಲಾ ಕಾರ್ಯದರ್ಶಿ ರವೀಂದ್ರ ವರದಿ ಮಂಡಿಸಿದರು. ಕೆ ಎಸ್ ಟಿ ಎ ರಾಜ್ಯ ಕಾರ್ಯದರ್ಶಿ ಕೆ.ರಾಘವನ್ ಮಾಸ್ಟರ್, ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ, ಪೈವಳಿಕೆ ಪಂಚಾಯತ್ ಸದಸ್ಯರಾದ ಆಶೋಕ ಭಂಡಾರಿ, ಇರ್ಶಾನ ಇಸ್ಮಾಯಿಲ್, ಕೆಎಸ್ ಟಿ ಎ ರಾಜ್ಯ ನೇತಾರರಾದ ಪಿ.ದಿಲೀಪ್ ಕುಮಾರ್, ಕೆ.ಹರಿದಾಸ್, ಟಿ.ಪ್ರಕಾಶನ್, ಎನ್.ಕೆ ಲಸಿತಾ, ಎಂ ಇ ಚಂದ್ರಾಂಗತನ್, ಕೆ ಎಸ್ ಟಿ ಎ ಜಿಲ್ಲಾಧ್ಯಕ್ಷರಾದ ಯು.ಶ್ಯಾಮ್ ಭಟ್, ಜಿಲ್ಲಾ ನೇತಾರರಾದ ವಿಜಯ ಸಿಎಚ್, ಮಮತಾ ಇ ಆರ್, ಬೆನ್ನಿ.ಟಿ ಮತ್ತು ಪ್ರಕಾಶನ್ ಪಿ ಮಾತನಾಡಿದರು. ಸಂತೋಷ ಕೆ.ವಿ ಧನ್ಯವಾದ ಹೇಳಿದರು.