ಬಾಯಾರು: ಕೆಂಪು ಕಲ್ಲು ಸಾಗಾಟದ ಲಾರಿ ಪಲ್ಟಿಯಾಗಿ ಚಾಲಕರು ಅಪಾಯದಿಂದ ಪಾರಾದ ಘಟನೆ ನಡೆದಿದೆ. ಮಾ.12ರಂದು ಮುಂಜಾನೆ ಕನಿಯಾಲ ಸಮೀಪದ ಬಂಗುಳೆ ಎಂಬಲ್ಲಿ ಅಪಘಾತ ಸಂಭಿಸಿದೆನ್ನಲಾಗಿದೆ.
ಧರ್ಮತ್ತಡ್ಕ ಭಾಗದಿಂದ ಕನಿಯಾಲ ದಾರಿಯಾಗಿ ಕರ್ನಾಟಕಕ್ಕೆ ಸಂಚರಿಸುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಮಗುಚಿಬಿದ್ದಿದೆ. ಆದರೆ ಚಾಲಕರು ಅಪಾಯದಿಂದ ಪಾರಾಗಿದ್ದಾರೆ. ಈ ಪ್ರದೇಶದಲ್ಲಿ ಈ ಹಿಂದೆ ಹಲವು ಭಾರಿ ಕಲ್ಲು ಸಾಗಾಟದ ಲಾರಿಗಳು ಮಗುಚಿ ಬಿದ್ದಿರುವುದಾಗಿ ಊರವರು ತಿಳಿಸಿದ್ದಾರೆ.