ಮಂಜೇಶ್ವರ: ದೇಶದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗುವುದು ಶತ ಸಿದ್ದ, ಅದು ದೇಶದ ಜನತೆಯ ವಿಶ್ವಾಸ ದ ಆಯ್ಕೆ ಯಾಗಲಿದೆ. ಎಡರಂಗ ಮತ್ತು ಕಾಂಗ್ರೆಸ್ ಗೆ ಅಭಿವೃದ್ಧಿ ಹೇಳಿ ಮತ ಪಡೆಯಲು ಸಾಧ್ಯವಿಲ್ಲ ಭ್ರಷ್ಟಾಚಾರ, ಈ ಎರಡು ಪಕ್ಷಗಳ ಮುಖ ಮುದ್ರೆ, ದೇಶದಲ್ಲಿ ಎಡರಂಗ ಮತ್ತು ಕಾಂಗ್ರೆಸ್ ಮಾಡಿರುವ ಇಂಡಿಯಾ ಒಕ್ಕೂಟ ಕೇರಳದಲ್ಲೇ ರಾಹುಲ್ ಗಾಂಧಿ ಸ್ಪರ್ದಿಸುವ ಲೋಕಸಭಾ ಕ್ಷೇತ್ರದಲ್ಲೇ ಸಾಧ್ಯವಾಗುತ್ತಿಲ್ಲ, ಕೇರಳದ ಹೊರಗೆ ಸೀತಾರಾಮ ಯಚೂರಿಯ ಕೈ ಹಿಡಿದೇ ಪ್ರಚಾರ ಮಾಡುವ ರಾಹುಲ್ ಸ್ಪರ್ಧೆಸುವ ಕ್ಷೇತ್ರದಲ್ಲೇ ಎಡರಂಗ ಅಭ್ಯರ್ಥಿ ಎದುರಾಳಿ ಹಾಸ್ಯಸ್ಪದ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಹೇಳಿದರು.
ವರ್ಕಾಡಿ ಬಿಜೆಪಿ ಕಾರ್ಯಕರ್ತರುಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ವರ್ಕಾಡಿ ನಿವಾಸಿಗೆ ಈ ಬಾರಿ ಬಿಜೆಪಿ ಗುರುತಿಸಿ ಅಭ್ಯರ್ಥಿ ಮಾಡಿರುವುದು ನಮಗೆ ಹೆಮ್ಮೆ ಎಂದರು.
ಮುಖಂಡರಾದ ಹರೀಶ್ ಚಂದ್ರ ಎಂ, ತುಳಸಿ ಕುಮಾರಿ, ರಕ್ಷನ್ ಅಡಕಲಾ, ಜಗದೀಶ್ ಚೆಂಡ್ಲಾ, ದೂಮಪ್ಪ ಶೆಟ್ಟಿ, ಯತೀರಾಜ್ ಶೆಟ್ಟಿ ಉಪಸ್ಥಿತರಿದ್ದರು. ಭಾಸ್ಕರ್ ಪೊಯ್ಯೇ ಸ್ವಾಗತಿಸಿ, ರವಿರಾಜ್ ವಂದಿಸಿದರು.