ಪೈವಳಿಕೆ: ಸಿ.ಪಿ.ಐ ಪಕ್ಷದ ಹಿರಿಯ ಮುಖಂಡ, ನಿವೃತ್ತ ಪೋಸ್ಟ್ ಮಾಸ್ಟರ್ ಚೇವಾರು ಬಳಿಯ ನೀರುಪಂತಿ ಅಚ್ಚುತ ರಾವ್ (85) ಮಾ.16ರಂದು ಬೆಳಗ್ಗೆ ನಿಧನ ಹೊಂದಿದರು. ಅವರು ಪೈವಳಿಕೆ ಪಂಚಾಯತ್ ಪರಿಸರದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಪ್ರಧಾನ ವಹಿಸಿದ್ದರು.
ಸುಬ್ಬಯಕಟ್ಟೆಯಲ್ಲಿ ತರಂಗಿಣಿ ಪ್ರೆಂಡ್ಸ್ ಕ್ಲಬ್ ನ್ನು ಸ್ಥಾಪಿಸಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವಂತೆ ಶ್ರಮವಹಿಸುತ್ತಿದ್ದರು. ಅವರ ಮಕ್ಕಳಾದ ಪ್ರಕಾಶ್ ಚಂದ್ರ ರಾವ್, ಶಶಿಧರ ರಾವ್, ಅನಿತ, ಸುಜಾತ, ಅಳಿಯಂದಿರಾದ ರಾಘವೇಂದ್ರ ಜಯ ಪ್ರಕಾಶ, ಸೊಸೆ ಶಮಿ೯ಳ, ಛಾಯ, ಶಾಂತಿ, ಅನಿತ, ಸಹೋದರ ಚಂದ್ರ ಶೇಖರ ರಾವ್, ಸಹೋದರಿಯರಾದ ಗಿರಿಜ, ಶಾರದೆ, ವಿಜಯಲಕ್ಷ್ಮಿ, ಶಾಂಭವಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿರುತ್ತಾರೆ.