ಉಡುಪಿ: ಚುನಾವಣಾ ಬಾಂಡ್ ದೇಶದ ಅತಿ ದೊಡ್ಡ ಭ್ರಷ್ಟಾಚಾರ, ಪಾಕಿಸ್ತಾನದ ಕಂಪನಿಯಿಂದ ಬಿಜೆಪಿ ದೇಣಿಗೆ ಪಡೆದಿದೆಚುನಾವಣಾ ಬಾಂಡ್ ದೇಶದ ಅತಿ ದೊಡ್ಡ ಭ್ರಷ್ಟಾಚಾರ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ

Share with

ಉಡುಪಿ: ಚುನಾವಣಾ ಬಾಂಡ್ ದೇಶದ ಅತಿ ದೊಡ್ಡ ಭ್ರಷ್ಟಾಚಾರ. ಸಿಬಿಐ ಇಡಿ ಐಟಿ ದಾಳಿ ಮಾಡಿ ಸಂಸ್ಥೆಗಳ ಬಾಂಡ್ ಪಡೆಯಲಾಗಿದೆ. ಪಾಕಿಸ್ತಾನದ ಕಂಪನಿಯಿಂದ ಬಿಜೆಪಿ ದೇಣಿಗೆ ಪಡೆದಿದೆ. ಮಾ.21ರಂದು SBI ಪೂರ್ಣ ಮಾಹಿತಿ ಕೊಟ್ರೆ ಎಲ್ಲಾ ವಿಚಾರಗಳು ಬಹಿರಂಗವಾಗುತ್ತದೆ ಎಂದು ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.

ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಹೇಳಿಕೆ

ಚುನಾವಣಾ ಬಾಂಡ್ ಕುರಿತಂತೆ ಕೇಂದ್ರ ವಿರುದ್ಧ ಸುಪ್ರೀಂ ಕೋರ್ಟ್ ಚಾಟಿ ಬೀಸಿರುವ ವಿಚಾರಕ್ಕೆ ಸಂಬಂಧಿಸಿ ಉಡುಪಿಯಲ್ಲಿ ಮಾ.22ರಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಒಟ್ಟು ಚುನಾವಣಾ ಬಾಂಡ್ ಗಳ ಪೈಕಿ ಶೇ.90ರಷ್ಟು ದೇಣಿಗೆಯನ್ನು ಬಿಜೆಪಿ ಪಕ್ಷ ಪಡೆದಿದೆ. ಕಳಪೆ ಕಂಪೆನಿಗಳು ಬಿಜೆಪಿಗೆ ದೇಣಿಗೆ ನೀಡಿವೆ. ಪ್ರಜಾಪ್ರಭುತ್ವದ ಆಶ್ರಯವನ್ನು ಎತ್ತಿ ಹಿಡಿಯುವುದು ಹೀಗೆಯಾ? ಎಂದು ಪ್ರಶ್ನಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕೋಟ ಶ್ರೀನಿವಾಸ ಪೂಜಾರಿ ಹಿರಿಯ ನಾಯಕ. ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಮತ್ತು ಜವಾಬ್ದಾರಿ ಇದೆ. ಜನತೆಯ ಪರವಾಗಿ ಅವರು ಕೆಲಸ ಮಾಡಬೇಕು. ಟಿಕೆಟ್ ಕೇಳದವರಿಗೆ ಬಿಜೆಪಿ ಟಿಕೆಟ್ ಕೊಟ್ಟಿದೆ. ಕೋಟ ಶ್ರೀನಿವಾಸ್ ಪೂಜಾರಿ ಸೋತರೂ ಸಂವಿಧಾನಿಕ ಹುದ್ದೆ ಇದೆ. ಅವರು ಆ ಅವಕಾಶವನ್ನು ನಿರ್ವಹಣೆ ಮಾಡಲಿ. ಕಾಂಗ್ರೆಸ್ ಒಡೆದ ಮನೆ ಅಲ್ಲ ಒಂದೇ ಮನೆ ನಾವೆಲ್ಲಾ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.


Share with

Leave a Reply

Your email address will not be published. Required fields are marked *