ಪುತ್ತೂರು: ಮಾ.23 ರಂದು ಸುದಾನ ಶಾಲೆಯಲ್ಲಿ “ಎಲ್ಲರೊಳಗೊಂದಾಗು” ಕೃತಿ ಲೋಕಾರ್ಪಣೆ

Share with

ಪುತ್ತೂರು: ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಶಾಲೆಯ ಅಂಗ ಸಂಸ್ಥೆಯಾದ ಸುದಾನ ಕಿಟ್ಟೆಲ್ ಸೆಂಟರ್ ಫಾರ್ ಡೆವಲಪ್‌ಮೆಂಟ್ ಸಂಸ್ಥೆಯು ಕೃತಿ ಅನಾವರಣ ಕಾರ್ಯಕ್ರಮವನ್ನು ಮಾರ್ಚ್ 23 ಶನಿವಾರದಂದು ಹಮ್ಮಿಕೊಂಡಿದೆ.

ಮಾ.23 ರಂದು ಸುದಾನ ಶಾಲೆಯಲ್ಲಿ "ಎಲ್ಲರೊಳಗೊಂದಾಗು" ಕೃತಿ ಲೋಕಾರ್ಪಣೆ

ಮಧ್ಯಾಹ್ನ 2 ಗಂಟೆಗೆ ಸುದಾನ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಶಾಲೆಯ ಕನ್ನಡ ಶಿಕ್ಷಕಿ ಶ್ರೀಮತಿ ಕವಿತಾ ಅಡೂರು ಅವರು ಬರೆದ “ಎಲ್ಲರೊಳಗೊಂದಾಗು” ಎಂಬ ಕೃತಿಯು ಬಿಡುಗಡೆಗೊಳ್ಳಲಿದೆ.

ಈ ಪುಸ್ತಕದಲ್ಲಿ ಮಂಕು ತಿಮ್ಮನ ಕಗ್ಗದ ವ್ಯಾಖ್ಯಾನವುಳ್ಳ ಕಗ್ಗದ ಬೆಳಕು ಅಂಕಣ ಬರೆಹಗಳ ಸಂಗ್ರಹವಿದೆ. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕರಾದ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಅವರು ವಹಿಸಲಿದ್ದು, ಹಿರಿಯ ಸಾಹಿತಿಗಳಾದ ಶ್ರೀಯುತ ವಿ ಬಿ ಅರ್ತಿಕಜೆಯವರು ಕೃತಿ ಬಿಡುಗಡೆಯನ್ನು ಮಾಡಲಿದ್ದಾರೆ. ಹಾಗೆಯೇ ಮಡಿಕೇರಿ ಆಕಾಶವಾಣಿಯ ಉದ್ಘೋಷಕರಾದ ಶ್ತೀಯುತ ಸುಬ್ರಾಯ ಸಂಪಾಜೆಯವರು ಕೃತಿ ಸಮೀಕ್ಷೆಯನ್ನು ಮಾಡಲಿದ್ದಾರೆ.

ಹಿರಿಯ ವಿದ್ವಾಂಸರಾದ ಮಂಜುಳಗಿರಿ ವೆಂಕಟರಮಣ ಭಟ್, ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಉಮೇಶ್ ನಾಯಕ್,ಶಾಲಾ ಸಂಚಾಲಕರಾದ ರೆ ವಿಜಯ ಹಾರ್ವಿನ್, ಸುದಾನ ಕಿಟ್ಟೆಲ್ ಸಂಶೋಧನಾ ಸಂಸ್ಥೆಯ ಕಾರ್ಯದರ್ಶಿ ಆಸ್ಕರ್ ಆನಂದ್, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ ನಾಗರಾಜ್ ಮುಂತಾದವರು ಉಪಸ್ಥಿತರಿರುತ್ತಾರೆ. ಬಿಡುಗಡೆಯ ಪ್ರಯುಕ್ತ ‘ಎಲ್ಲರೊಳಗೊಂದಾಗು’ ಪುಸ್ತಕವು ಆ ದಿನ ರಿಯಾಯಿತಿ‌ ದರದಲ್ಲಿ ಮಾರಾಟವಾಗಲಿದೆ.


Share with

Leave a Reply

Your email address will not be published. Required fields are marked *