ಕಾಸರಗೋಡು: ಜನರಲ್ ಹಾಸ್ಪಿಟಲ್ ಟ್ರೈಬಲ್ ಮೊಬೈಲ್ ಯುನಿಟ್ ಸಹಯೋಗದಲ್ಲಿ ಪರಿಶಿಷ್ಟ ಪಂಗಡದವರಿಗೆ ಉಚಿತ ವೈದ್ಯಕೀಯ ಶಿಬಿರ

Share with

ಕಾಸರಗೋಡು: ಐಎಂಎ ಕಾಸರಗೋಡು ಶಾಖೆಯು ಕಾಸರಗೋಡು ಜನರಲ್ ಹಾಸ್ಪಿಟಲ್ ಟ್ರೈಬಲ್ ಮೊಬೈಲ್ ಯುನಿಟ್ ಸಹಯೋಗದಲ್ಲಿ ಪರಿಶಿಷ್ಟ ಪಂಗಡದವರಿಗೆ ಉಚಿತ ವೈದ್ಯಕೀಯ ಶಿಬಿರವನ್ನು ಬದಿಯಟುಕ ಕೊರಗ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು.

ಪರಿಶಿಷ್ಟ ಪಂಗಡದವರಿಗೆ ಉಚಿತ ವೈದ್ಯಕೀಯ ಶಿಬಿರ

ಐಎಂಎ ಜಿಲ್ಲಾ ಸಂಚಾಲಕ ಡಾ.ಬಿ.ನಾರಾಯಣ ನಾಯ್ಕ್ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿದರು. ಐಎಂಎ ಕಾಸರಗೋಡು ಶಾಖೆಯ ಅಧ್ಯಕ್ಷ ಡಾ.ಜಿತೇಂದ್ರ ರೈ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಾ.ಕಾಸಿಂ ಟಿ ಸ್ವಾಗತಿಸಿದರು.

ಜನರಲ್ ಹಾಸ್ಪಿಟಲ್ ಟ್ರೈಬಲ್ ಮೊಬೈಲ್ ಯುನಿಟ್ ಸಹಯೋಗದಲ್ಲಿ ಪರಿಶಿಷ್ಟ ಪಂಗಡದವರಿಗೆ ಉಚಿತ ವೈದ್ಯಕೀಯ ಶಿಬಿರ

WIMA ಸಂಚಾಲಕ ಡಾ.ರೇಖಾ ರೈ, ಹಿರಿಯ ನೇತ್ರ ತಜ್ಞ ಡಾ.ಭರತನ್ ಎ.ವಿ, ಟ್ರೈಬಲ್ ಮೊಬಿಲ್ ಯುನಿಟಾ ವೈದ್ಯಾಧಿಕಾರಿ ಡಾ.ಸುದೇವ್ ಎಸ್.ಎಸ್, ದಂತ ವೈದ್ಯಾಧಿಕಾರಿ ಡಾ.ಮುಮಿನಾ, ಸ್ತ್ರೀರೋಗ ತಜ್ಞ ಡಾ.ಜ್ಯೋತಿ ಎಸ್, ಚೆಸ್ಟ್ ತಜ್ಞ ಡಾ.ನಾರಾಯಣ ಪ್ರದೀಪ್, ಮನೋವೈದ್ಯೆ ಡಾ.ಜೋಸ್ನಾ ರೋಗಿಗಳ ತಪಾಸಣೆ ನಡೆಸಿದರು. ಸುರೇಶ್ ಬಾಬು ಐ ಫೌಂಡೇಶನ್ ತಂಡ ನೇತ್ರ ತಪಾಸಣೆ ನಡೆಸಿತು.

ಶಿಬಿರದಲ್ಲಿ ಸುಮಾರು 80 ರೋಗಿಗಳ ತಪಾಸಣೆ ಮಾಡಲಾಯಿತು.

ಮಧುಮೇಹ, ಥೈರಾಯ್ಡ್, ರಕ್ತಹೀನತೆ ಮುಂತಾದ ಕಾಯಿಲೆಗಳಿಗೆ ವಿಶೇಷ ರಕ್ತ ಪರೀಕ್ಷೆ ಮತ್ತು ಕ್ಯಾನ್ಸರ್ ತಪಾಸಣೆಗಾಗಿ ಪ್ಯಾಪ್ ಸ್ಮೀಯರ್ ಪರೀಕ್ಷೆಯನ್ನು ಮಾಡಲಾಗುತ್ತದೆ. ಮಕ್ಕಳ ಪೋಷಣೆ ಕುರಿತು ಡಾ.ಬಿ.ನಾರಾಯಣ ಹಾಗೂ ಕ್ಷಯರೋಗ ಕುರಿತು ಡಾ.ಪ್ರದೀಪ್ ಕುಮಾರ್ ಜಾಗೃತಿ ತರಗತಿ ನಡೆಸಿದರು.

80 ರೋಗಿಗಳ ತಪಾಸಣೆ ಮಾಡಲಾಯಿತು.

ನವಶಕ್ತಿ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ನ ಕಾರ್ಯಕರ್ತರು ಅಗತ್ಯ ನೆರವು ನೀಡಿದರು. ಶಿಬಿರದಲ್ಲಿ ಸುಮಾರು 80 ರೋಗಿಗಳ ತಪಾಸಣೆ ಮಾಡಲಾಯಿತು.


Share with

Leave a Reply

Your email address will not be published. Required fields are marked *