ಉಪ್ಪಳ: ಒಬ್ಬಂಟಿಯಾಗಿ ವಾಸ ಮಾಡುತ್ತಿದ್ದ ಯುವಕನ ಮೃತದೇಹ ಜೀರ್ಣಾವಸ್ಥೆಯಲ್ಲಿ ಮನೆಯೊಳಗೆ ನೇಣುಗಿದ ಸ್ಥಿತಿಯಲ್ಲಿ ಪತ್ತೆ

Share with

ಉಪ್ಪಳ: ಒಬ್ಬಂಟಿಯಾಗಿ ವಾಸಮಾಡುತ್ತಿದ್ದ ಯುವಕನ ಮೃತದೇಹ ಜೀರ್ಣಾವಸ್ಥೆಯಲ್ಲಿ ಮನೆಯೊಳಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.

ಮಂಡೆಕಾಪು ಬಳಿಯ ಸುಬ್ಬಯ್ಯಕಟ್ಟೆ ನಿವಾಸಿ [ದಿ] ಬಟ್ಯಪ್ಪ ಭಂಡಾರಿ ರವರ ಪುತ್ರ ಜಯಪ್ರಕಾಶ್ ಭಂಡಾರಿ

ಮಂಡೆಕಾಪು ಬಳಿಯ ಸುಬ್ಬಯ್ಯಕಟ್ಟೆ ನಿವಾಸಿ [ದಿ] ಬಟ್ಯಪ್ಪ ಭಂಡಾರಿ ರವರ ಪುತ್ರ ಜಯಪ್ರಕಾಶ್ ಭಂಡಾರಿ [45] ಎಂಬವರ ಮೃತದೇಹ ಪತ್ತೆಯಾಗಿದೆ. ಹಲವು ವರ್ಷಗಳಿಂದ ಒಬ್ಬಂಟಿಯಾಗಿ ವಾಸವಾಗಿದೆನ್ನಲಾಗಿದೆ. ನಿರಂತರ ಅಂಗಡಿಪರಿಸರದಲ್ಲಿ ಕಂಡುಬರುತ್ತಿದ್ದ ಇವರು ಅಲ್ಪ ದಿನಗಳಿಂದ ಕಾಣಿಸದ ಹಿನ್ನೆಲೆಯಲ್ಲಿ ಸಂಬಂಧಿಕರು ಮಾ.23ರಂದು ಸಂಜೆ ಜಯಪ್ರಕಾಶ್ ವಾಸಿಸುತ್ತಿದ್ದ ಮನೆಗೆ ತೆರಳಿದ ವೇಳೆ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದೆ. ಸುಮಾರು 15 ದಿನಗಳ ಹಿಂದೆ ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ.

ಕಂಬಳಿಯಿಂದ ಮನೆಯ ಅಡ್ಡಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಜೀರ್ಣಾವಸ್ಥೆಯಲ್ಲಿ ಪತ್ತೆಯಾಗಿದೆ. ಮಾಹಿತಿ ತಿಳಿದು ತಲುಪಿದ ಸಿಪಿಎಂ ನೇತಾರ ಬಶೀರ್, ವಾರ್ಡ್ ಸದಸ್ಯ ಅಶೋಕ್ ಭಂಡಾರಿಯವರ ನೇತೃತ್ವದಲ್ಲಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದರಂತೆ ಸ್ಥಳಕ್ಕೆ ತಲುಪಿದ ಕುಂಬಳೆ ಪೋಲೀಸರು ಮೃತದೇಹದ ಪಂಜನಾಮ ನಡೆಸಿ ಕಾಸರಗೋಡು ಜನರಲ್ ಅಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಮೃತದೇಹದ ಅಂತ್ಯಸಂಸ್ಕಾರ ಮಾ.24ರಂದು ಮಧ್ಯಾಹ್ನ ಮನೆ ಬಳಿಯಲ್ಲಿ ನಡೆಸಲಾಯಿತು.

ಇವರು ನಿರಂತರ ಮದ್ಯ ಪಾನಿಯಾಗಿದ್ದು, ಇವರ ಕಿರುಕಳದಿಂದ ಪತ್ನಿ, ಮಕ್ಕಳು, ತಾಯಿ ಬೇರೆ ವಾಸವಾಗಲು ಕಾರಣವೆನ್ನಲಾಗಿದೆ. ಮಾತ್ರವಲ್ಲ ಇವರು ಅಬಕಾರಿ ಕೇಸೊಂದರಲ್ಲಿ ಜೈಲಿನಲ್ಲಿದ್ದು, ಮೂರು ತಿಂಗಳ ಹಿಂದೆ ಬಿಡುಗಡೆಗೊಂಡಿರುವುದಾಗಿ ಹೇಳಲಾಗುತ್ತಿದೆ. ಮೃತರು ತಾಯಿ ರತಿ, ಪತ್ನಿ ರಾಜೀವಿ, ಮಕ್ಕಳಾದ ವಿದೀತ್, ಆದೀಶ್, ನಾಲ್ಕು ಮಂದಿ ಸಹೋದರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.


Share with

Leave a Reply

Your email address will not be published. Required fields are marked *