ನಾವೂರ ಶಕ್ತಿಕೇಂದ್ರದ ಲೋಕಸಭಾ ಚುನಾವಣಾ ಪ್ರಚಾರ ಸಭೆ

Share with

ನಾವೂರ ಶಕ್ತಿಕೇಂದ್ರದ ಲೋಕಸಭಾ ಚುನಾವಣಾ ಪ್ರಚಾರ ಸಭೆ ನಾವೂರ ಸದಾನಂದ ಗೌಡ ಅವರ ಮನೆಯಲ್ಲಿ ನಡೆಯಿತು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ, ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕು, ಈ ನಿಟ್ಟಿನಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶ ಮಾಡಿಕೊಡದೆ ಕಾರ್ಯಕರ್ತರು ಜೊತೆಯಾಗಿ ಕೆಲಸ ಮಾಡಿ ಅತ್ಯಧಿಕ ಅಂತರದಲ್ಲಿ ಗೆಲವುವನ್ನು ಸಾಧಿಸಬೇಕು ಎಂದು ಅವರು ತಿಳಿಸಿದರು.

ನಾವೂರ ಶಕ್ತಿಕೇಂದ್ರದ ಲೋಕಸಭಾ ಚುನಾವಣಾ ಪ್ರಚಾರ ಸಭೆ

ಲೋಕಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ ಮಾತನಾಡಿ, ಕಾರ್ಯಕರ್ತರು ಜಿಲ್ಲೆಯ ಜನರು ನನಗೆ ನೀಡುವ ಗೌರವ , ತೋರಿಸುವ ಪ್ರೀತಿ ಮೋದಿಯವರ ಹಾಗೂ ಹಿಂದುತ್ವದ ಮೇಲಿನ ಪ್ರೀತಿಯಿಂದ ಎಂಬ ಸ್ಪಷ್ಟವಾದ ಅರಿವು ನನಗೆ ಇದೆ‌ . ಇದೇ ರೀತಿ ಮುಂದುವರಿಸಿಕೊಂಡು ಹೋಗುವ ಶಕ್ತಿಯನ್ನು ದೇವರು ನೀಡಲಿ ಎಂದು ಹೇಳಿದರು.

ಲೋಕಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ

ಪ್ರತಿಷ್ಠಿತ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಲು ಅವಕಾಶ ಸಿಕ್ಕಿದೆಯೆಂದಾದರೆ ತುಳು ನಾಡಿನ ದೈವದೇವರ ಆಶ್ರೀರ್ವಾದ ಹಾಗೂ ತುಳುನಾಡಿನ ಜನರ ಪ್ರೀತಿ ವಿಶ್ವಾಸ ಶುಭಹಾರೈಕೆಯೆ ಕಾರಣ ಎಂದು ವಿಶ್ವಾಸದಿಂದ ಹೇಳಬಲ್ಲೆ ಎಂದರು.

ಭವಿಷ್ಯವನ್ನು ‌ನಿರ್ಧರಿಸುವ ಚುನಾವಣಾ ಇದಾಗಿದ್ದು, ಮತ್ತೊಮ್ಮೆ ಮೋದಿಯವರ ಕನಸು ನನಸಾಗಲು ಕಾರ್ಯಕರ್ತರು ಚುನಾವಣೆಯವರಗೂ ಅವಿರತವಾಗಿ ಶ್ರಮವಹಿಸಿ ಪಕ್ಷಕ್ಕೆ ಶಕ್ತಿ ನೀಡಬೇಕಾಗಿದೆ ಎಂದು ಅವರು ತಿಳಿಸಿದರು.

ಶ್ರೀರಾಮ ಮಂದಿರದ ನಿರ್ಮಾಣವಾಗಿದ್ದು ಹಿಂದೂ ಸಮಾಜದ ಸ್ವಾಭಿಮಾನದ ಪ್ರತೀಕವಾಗಿದೆ. ಇಂತಹ ಉತ್ಕೃಷ್ಟ ಕಾಲಘಟ್ಟದಲ್ಲಿ ಚುನಾವಣಾ ಬಂದಿದ್ದು, ಜಿಲ್ಲೆಯನ್ನು ಪ್ರತಿನಿಧಿಸಲು ಹಿರಿಯರು ಅವಕಾಶ ನೀಡಿದ್ದು ನನ್ನ ಪೂರ್ವಜನ್ಮದ ಪುಣ್ಯದ ಫಲ ಎಂದು ತಿಳಿಸಿದರು.

ಹಿರಿಯರ ಮತ್ತು ಕಾರ್ಯಕರ್ತರ ಸಲಹೆ ಪಡೆದು ಈ ಜಿಲ್ಲೆಯ ಅಭಿವೃದ್ಧಿಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಅವರು ತಿಳಿಸಿದರು. ರಾಜಕೀಯವಾಗಿ ಪಕ್ಷವನ್ನು ಯಾವ ರೀತಿ ಬೆಳೆಸಬೇಕು, ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬೇಕು ಎಂಬುದಕ್ಕೆ ಸಾಕ್ಷಿಯಾದ ಉತ್ತಮ ವ್ಯಕ್ತಿತ್ವದ ಶಾಸಕ ರಾಜೇಶ್ ನಾಯ್ಕ್ ಅವರು ನನಗೆ ಪ್ರೇರಣೆಯಾಗಿದ್ದಾರೆ ಎಂದು ಅವರು ತಿಳಿಸಿದರು.

ಚುನಾವಣಾ ಪ್ರಭಾರಿ ಜಗದೀಶ್ ಶೇಣವ ಮಾತನಾಡಿ, ಗೆಲುವು ನಿಶ್ಚಿತ ಎಂದು ನಾವು ಮೈಮರೆತು ಕುಳಿತುಕೊಳ್ಳುವುದು ಸರಿಯಲ್ಲ ಎಂದು ಕಾರ್ಯಕರ್ತರನ್ನು ಎಚ್ಚರಿಸುವ ಕೆಲಸ ಮಾಡಿದರು. ಬಂಟ್ವಾಳ ಮಂಡಲದ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಬಿಜೆಪಿ ಪ್ರಮುಖರಾದ ವಿಕಾಸ್ ಪುತ್ತೂರು, ಪೂಜಾ ಪೈ, ಸುಲೋಚನ ಜಿ.ಕೆ.ಭಟ್, ದೇವದಾಸ್ ಶೆಟ್ಟಿ, ರಾಮ್ ದಾಸ್ ಬಂಟ್ವಾಳ, ದಿನೇಶ್ ಅಮ್ಟೂರು, ದೇವಪ್ಪ ಪೂಜಾರಿ, ಸಂದೇಶ್ ಶೆಟ್ಟಿ, ಚಿದಾನಂದ ರೈ ಕಕ್ಯ, ಸದಾನಂದ ಗೌಡ ನಾವೂರ, ರವೀಶ್ ಶೆಟ್ಟಿ ಕರ್ಕಳ, ಡೊಂಬಯ್ಯ ಅರಳ, ಹರೀಶ್ ಪ್ರಭು, ಗ್ರಾ.ಪಂ‌.ಅಧ್ಯಕ್ಷರುಗಳಾದ ಅಜಿತ್ ಶೆಟ್ಟಿ, ಇಂದಿರಾ, ಶಾರದಾ, ರೇವತಿ ಉಳಿ, ಮಾಲತಿ, ಲೀಲಾವತಿ, ದೇವದಾಸ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ವಜ್ರನಾಥ್ ಕಲ್ಲಡ್ಕ ಸ್ವಾಗತಿಸಿದರು.ರಂಜಿತ್ ಮೈರ ಕಾರ್ಯಕ್ರಮ ನಿರೂಪಿಸಿದರು.


Share with

Leave a Reply

Your email address will not be published. Required fields are marked *