ಉಪ್ಪಳ: ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎಂ.ಎಲ್ ಅಶ್ವಿನಿ ಇವರ ಗೆಲುವಿಗೋಸ್ಕರ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಎನ್‌ಡಿಎ ಒಕ್ಕೂಟದ ಕಾರ್ಯಕರ್ತರ ಸಮಾವೇಶ ಮಾ.29ರಂದು ಸಮ್ಜೆ 3 ಗಂಟೆಗೆ ಕೈಕಂಬದ ಪಂಚಮಿ ಪ್ಲಾಜಾ ಸಭಾಂಗಣದಲ್ಲಿ ನಡೆಯಲಿದೆ.
ಎನ್‌ಡಿಎ ಕಾಸರಗೋಡು ಲೋಕಸಭಾ ಚುನಾವಣಾ ಸಮಿತಿ ಸಂಚಾಲಕರಾದ ಅಡ್ವಕೇಟ್ ಎಂ ನಾರಾಯಣ ಭಟ್ ಉದ್ಘಾಟಿಸುವರು. ಬಿಜೆಪಿ ನೇಷನಲ್ ಕೌನ್ಸಿಲ್ ಸದಸ್ಯ ಪ್ರಮೀಳಾ.ಸಿ ನಾಯ್ಕ್ ಮೊದಲಾದವರು ಭಾಗವಹಿಸಿ ಮಾರ್ಗದರ್ಶನ ನೀಡುವರು. ಪಕ್ಷದ ಕಾರ್ಯಕರ್ತರು, ಹಿತೈಷಿಗಳು, ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ಸುಧಾಮ ಗೋಸಾಡ ವಿನಂತಿಸಿದ್ದಾರೆ.