ಉಪ್ಪಳ: ಹೊಸಂಗಡಿ ಬಳಿಯ ವಾಮಂಜೂರು ಅಬಕಾರಿ ಚೆಕ್‌ಪೋಸ್ಟ್ ಬಳಿಯಲ್ಲಿ ಮಾರಾಟ ತೆರಿಗೆ ಇಲಾಖೆಯ ವಾಹನವೆನ್ನಲಾಗುತ್ತಿರುವ ಸರಕಾರಿ ವಾಹನವೊಂದು ತುಕ್ಕುಹಿಡಿದು ಶೋಚನೀಯವಸ್ಥೆಗೆ ತಲುಪಿರುವ ದೃಶ್ಯ ಕಂಡುಬರುತ್ತಿದೆ.
ಇಲ್ಲಿನ ಅಬಕಾರಿ ಚೆಕ್ಪೋಸ್ಟ್ ಬಳಿಯಲ್ಲಿಯೇ ಈ ಹಿಂದೆ ಹಲವಾರು ವರ್ಷಗಳ ಕಾಲ ಮಾರಾಟ ತೆರಿಗೆ ಇಲಾಖೆ ಕಚೇರಿಯೂ ಕಾರ್ಯವೆಸಗುತ್ತಿರುವ ಸಂದರ್ಭದಲ್ಲಿ ಈ ವಾಹನ ಹಾನಿಗೀಡಾದ ಸ್ಥಿತಿಯಲ್ಲಿಯೇ ಇತ್ತೆಂದು ಹೇಳಲಾಗುತ್ತಿದೆ.
ಆದರೆ ಜಿ.ಎಸ್.ಟಿ ಆರಂಭವಾದ ಬಳಿಕ ಮಾರಾಟ ತೆರಿಗೆ ಚೆಕ್ಪೋಸ್ಟ್ ಸ್ಥಗಿತಗೊಳಿಸಲಾಗಿದರೂ ಈ ವಾಹನ ಮಾತ್ರ ಅಲ್ಲಿ ಉಳಿದುಕೊಂಡಿದೆ. ಈ ಕಟ್ಟಡದಲ್ಲಿ ಅಲ್ಪ ಕಾಲ ಮಾರಾಟ ತೆರಿಗೆಯ ಕಮ್ಮೊಂಡ್ ಸೆಂಟರ್ ಕಾರ್ಯಚರಿಸುತ್ತು. ಆದರೆ ಅದೂ ಕೂಡಾ ಮುಚ್ಚುಗಡೇಗೊಂಡಿರುವುದಾಗಿ ಹೇಳಲಾಗುತ್ತಿದೆ. ಲಕ್ಷ ಗಟ್ಟಲೆ ಬೆಲೆ ಬಾಳುವ ವಾಹನ ತುಕ್ಕುಹಿಡಿದು ನಶಿಸುತ್ತಿದೆ.