ಉಪ್ಪಳ: ಮಂಗಲ್ಪಾಡಿ ಪುಳಿಕುತ್ತಿ ಐಲ ಬ್ರಹ್ಮಶ್ರೀ ಮೊಗೇರ ಮಹಾಕಾಳಿ ದೈವಸ್ಥಾನದ ವಾರ್ಷಿಕ ನೇಮೋತ್ಸವದ ಅಂಗವಾಗಿ ಸಭಾ ಕಾರ್ಯಕ್ರಮ ನಡೆಯಿತು.
ಧಾರ್ಮಿಕ ಮುಂದಾಳು ಎಂ.ಕೆ ಅಶೋಕ ಕುಮಾರ್ ಹೊಳ್ಳ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಮಂಗಲ್ಪಾಡಿ ಪಂಚಾಯತ್ ಸದಸ್ಯೆ ಸುಧಾಗಣೇಶ್, ಮಾಜಿ ಸದಸ್ಯೆ ಜಯಲಕ್ಷ್ಮೀ ಮಯ್ಯ ತಿಂಬರ, ಗೋಪಾಲ ಪೋಲೀಸ್ ಪುಳಿಕುತ್ತಿ ಉಪಸ್ಥಿತಿತರಿದ್ದರು. ಪ್ರೇಮ ಟೀಚರ್ ಸ್ವಾಗತಿಸಿ, ಸಮಾಜ ಸೇವಕ ರಾಮಚಂದ್ರ ಬಲ್ಲಾಳ್ ವಂದಿಸಿದರು. ಸುಜಿತ್ ಮಾಸ್ಟರ್ ಪುಳಿಕುತ್ತಿ ನಿರೂಪಿಸಿದರು. ಜ್ಯೋತಿಕಾ, ಅಶ್ವಥಿ, ತನ್ವಿ ಪ್ರಾರ್ಥನೆ ಹಾಡಿದರು.