ಕಲ್ಲಡ್ಕ: ಪೂರ್ವ ಪ್ರಾಥಮಿಕ ತರಗತಿ ಮಕ್ಕಳ ಕಿಂಡರ್ ಗಾರ್ಟನ್ ವಿಭಾಗದ ಪದವಿ ಪ್ರದಾನ ಕಾರ್ಯಕ್ರಮ

Share with

ಕಲ್ಲಡ್ಕ: ಇಂದಿನ ವೈಜ್ಞಾನಿಕ ಜಗತ್ತು ಮಕ್ಕಳ ಮಾನಸಿಕ, ಭಾವನಾತ್ಮಕ ಮತ್ತು ಶೈಕ್ಷಣಿಕವಾಗಿ ಬಹಳಷ್ಟು ಪ್ರಭಾವವನ್ನು ಬೀರುತ್ತಿದೆ. ಜೊತೆಗೆ ಪೋಷಕರ ನಡುವಿನ ಸಂಬಂಧ ನೇರವಾಗಿ ಮಕ್ಕಳಲ್ಲಿ ಬದಲಾವಣೆಯನ್ನು ಉಂಟುಮಾಡುತ್ತವೆ.

ಮಕ್ಕಳ ಕಿಂಡರ್ ಗಾರ್ಟನ್ ವಿಭಾಗದ ಪದವಿ ಪ್ರದಾನ ಕಾರ್ಯಕ್ರಮ

ಇಂದು ಮಗು ಕೇಳಿ ಕಲಿಯುವುದಕ್ಕಿಂತ ವೇಗವಾಗಿ ನೋಡಿ ಕಲಿಯುವ ಮಟ್ಟಕ್ಕೆ ಬದಲಾವಣೆಯನ್ನು ಹೊಂದಿದೆ. ಆದ್ದರಿಂದ ಮಗುವಿಗೆ ಬೇಕಾದ ಉತ್ತಮ ಶಿಕ್ಷಣವನ್ನು ಪೋಷಕರು ಆ ಮಗುವಿನ ಜೊತೆಗಿದ್ದು ಅದಕ್ಕೆ ಕಾಣುವ ರೀತಿಯಲ್ಲಿ ಬದಲಾವಣೆಯನ್ನು ತರಲು ಪ್ರಯತ್ನಿಸಬೇಕು. ಯಾವುದೇ ಕಲಿಕೆಯು ನಿರಂತರವಾಗಿ ಅಭಿವೃದ್ಧಿಯನ್ನು ಕಾಣಬೇಕಾದರೆ ಅದಕ್ಕೆ ತಕ್ಕ ಉತ್ತಮವಾದ ಪೂರಕ ಅವಕಾಶಗಳನ್ನು ಕೊಟ್ಟಾಗ ಮಾತ್ರ ಮಗು ಪ್ರಗತಿಯನ್ನು ಹೊಂದಲು ಸಾಧ್ಯ ಎಂದು ಬಂಟ್ವಾಳ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವಿದ್ಯಾ ಹೇಳಿದರು.

ಪೂರ್ವ ಪ್ರಾಥಮಿಕ ತರಗತಿ ಮಕ್ಕಳ ಕಿಂಡರ್ ಗಾರ್ಟನ್ ವಿಭಾಗದ ಪದವಿ ಪ್ರದಾನ ಕಾರ್ಯಕ್ರಮ

ಅವರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿ ಪೂರ್ವ ಪ್ರಾಥಮಿಕ ತರಗತಿ ಮಕ್ಕಳ ಕಿಂಡರ್ ಗಾರ್ಟನ್ ವಿಭಾಗದ ಪದವಿ ಪ್ರದಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾಡಿದರು. ಕಾರ್ಯಕ್ರಮದ ಅಧ್ಯಕ್ಷಥೆಯನ್ನು ಶಾಲಾಭಿವೃದಿ ಸಮಿತಿಯ ಅಧ್ಯಕ್ಷರಾದ ಮಧುಸೂಧನ್ ಐತಾಳ್ ವಹಿಸಿದ್ದರು. ವೇದಿಕೆಯಲ್ಲಿ ಶಾಲಾಭಿವೃದಿ ಸಮಿತಿಯ ಉಪಾಧ್ಯಕ್ಷೆ, ಆಪ್ಸ, ಸದಸ್ಯರುಗಳಾದ ಸುರೇಶ್, ಸುನಿತಾ ಉಪಸ್ಥಿತರಿದ್ದರು.

ಶಾಲಾ ಪದವೀಧರ ಮುಖ್ಯ ಶಿಕ್ಷಕ ಅಬ್ಬುಬೊಕ್ಕರ್ ಅಶ್ರಫ್ ಪ್ರಾಸ್ತವಿಕದೊಂದಿಗೆ ಸ್ವಾಗತಿಸಿ, ಶಿಕ್ಷಕಿ ಅಶ್ವಿತಾ, ವಂದಿಸಿ, ಶಿಕ್ಷಕಿ ಮಲ್ಲಿಕಾ ಕಾರ್ಯಕ್ರಮ ನೀರೂಪಿಸಿದರು. ಪೂರ್ವಪ್ರಥಮಿಕ ಮಕ್ಕಳ ಪೋಷಕರು ಶಾಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


Share with

Leave a Reply

Your email address will not be published. Required fields are marked *