ಉಪ್ಪಳ: ಕೇಂದ್ರ ಯೋಜನೆ ಜಾರಿಗೆ ಯಶಸ್ವಿಯಾಗಲು ಬಿಜೆಪಿ ಗೆಲುವು ಅಗತ್ಯ: ನ್ಯಾ. ನಾರಾಯಣ ಭಟ್

Share with

ಉಪ್ಪಳ: ದೇಶದ ಪ್ರತಿ ಪ್ರಜೆಯು ಕೇಂದ್ರ ಯೋಜನೆಗಳ ಫಲನುಭವಿಗಳು, ಕೇರಳ ಸರಕಾರ ಕೇಂದ್ರ ಜನಪರ ಯೋಜನೆ ಗಳನ್ನು ಬುಡಮೇಲೂ ಗೊಳಿಸುವುದನ್ನು ನಿಲ್ಲಿಸಲು ನಮ್ಮಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು. ಗೆಲುವು ದಾಖಲಿಸಲು ಕಾರ್ಯಕರ್ತರ ಪ್ರಯತ್ನ ಅತೀ ಅಗತ್ಯ ಎಂದು ಎನ್‌ಡಿಎ ಕಾಸರಗೋಡು ಲೋಕಸಭಾ ಚುನಾವಣಾ ಸಮಿತಿ ಸಂಚಾಲಕರಾದ ನ್ಯಾಯವಾದಿ ಎಂ. ನಾರಾಯಣ ಭಟ್ ಹೇಳಿದರು.

ಎನ್.ಡಿ.ಎ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರ ಸಭೆ

ಅವರು ಮಾ.29ರಂದು ಸಂಜೆ ಕೈಕಂಬ ಪಂಚಮಿ ಸಭಾಂಗಣದಲ್ಲಿ ಜರಗಿದ ಎನ್.ಡಿ.ಎ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಕೈಕಂಬ ಪಂಚಮಿ ಸಭಾಂಗಣದಲ್ಲಿ ಜರಗಿದ ಎನ್.ಡಿ.ಎ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರ ಸಭೆ

ಸುಧಾಮ ಗೋಸಾಡ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಎನ್‌ಡಿಎ ಚುನಾವಣಾ ಮೆನೆಜ್ಮೆಂಟ್ ಸಮಿತಿಯನ್ನು ಘೋಷಣೆ ಮಾಡಿದರು. ಅರಿಬೈಲ್ ಗೋಪಾಲ್ ಶೆಟ್ಟಿ ಸಂಚಾಲಕರು ಹಾಗೂ 150 ಜನರ ಸಮಿತಿ ರಚಿಸಲಾಯಿತು. ನ್ಯಾ ಬಾಲಕೃಷ್ಣ ಶೆಟ್ಟಿ, ಸುರೇಶ ಪೂಕಟ್ಟೆ, ಎ.ಕೆ ಕಯ್ಯಾರ್, ವಿಜಯ್ ರೈ, ಮಣಿಕಂಠ ರೈ ಆದರ್ಶ ಬಿ ಎಂ, ಸುನಿಲ್ ಅನಂತಪುರ ವೇದಿಕೆ ಯಲ್ಲಿ ಉಪಸ್ಥಿತರಿದ್ದರು. ವಸಂತ್ ಮಯ್ಯ ಸ್ವಾಗತಿಸಿ, ಯತೀರಾಜ್ ಶೆಟ್ಟಿ ಧನ್ಯವಾದ ನೀಡಿದರು.


Share with

Leave a Reply

Your email address will not be published. Required fields are marked *