ಬದಿಯಡ್ಕ: ಕುಂಬಡಾಜೆ ಗ್ರಾಮಸೇವಾ ಸಂಘ ಗ್ರಂಥಾಲಯ ಏತಡ್ಕದ ಮಕ್ಕಳ ವೇದಿಕೆ ರೂಪೀಕರಣವು ಸಮಾಜಮಂದಿರ ಏತಡ್ಕದಲ್ಲಿ (ಮಾ.29) ಶುಕ್ರವಾರ ಗ್ರಂಥಾಲಯದ ಅಧ್ಯಕ್ಷ ವೈ.ಕೆ ಗಣಪತಿ ಭಟ್ಟರ ಅಧ್ಯಕ್ಷತೆಯಲ್ಲಿ ಜರಗಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಪಂಚಾಯತಿ ಗ್ರಂಥಶಾಲಾ ಸಮಿತಿಯ ಕನ್ವೀನರ್ ಅಶ್ರಫ್ ಬೆಳಿಂಜ ಮಕ್ಕಳ ವೇದಿಕೆಯನ್ನು ಔಪಚಾರಿಕವಾಗಿ ಉದ್ಘಾಟಿಸಿ ಶುಭಹಾರೈಸುವುದರೊಂದಿಗೆ ಇಂದಿನ ಈ ಮಕ್ಕಳೇ ಮುಂದೆ ಗ್ರಂಥಾಲಯದ ರೂವಾರಿಗಳು ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಮಕ್ಕಳ ವೇದಿಕೆಯ ಕಾರ್ಯಕಾರೀ ಸಮಿತಿಯನ್ನು ರೂಪೀಕರಿಸಸಲಾಯಿತು. ಚಂದ್ರಶೇಖರ್ ಏತಡ್ಕ, ವೈ ವಿ ಸುಬ್ರಹ್ಮಣ್ಯ ಭಟ್, ಡಾ ವೇಣುಗೋಪಾಲ್ ಕಳೆಯತ್ತೋಡಿ, ಶಶಿಧರ ಕುದಿಂಗಿಲ, ನರಸಿಂಹ ಭಟ್ ಕಟ್ಟದಮೂಲೆ ಮೊದಲಾದ ಗಣ್ಯರು ಮಕ್ಕಳವೇದಿಕೆಗೆ ಶುಭಹಾರೈಸಿ ಮಾತನಾಡಿದರು. ಮಕ್ಕಳ ವೇದಿಕೆಯ ಮಕ್ಕಳಿಂದ ಕಾರ್ಯಕ್ರಮ ವೈವಿಧ್ಯ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿತು. ವೈ ಕೆ ಗಣಪತಿ ಭಟ್ ಕಾರ್ಯಕ್ರಮ ನಿರೂಪಿಸಿ, ಗ್ರಂಥಾಲಯದ ಕಾರ್ಯದರ್ಶಿ ಗಣರಾಜ ಕೆ ಸ್ವಾಗತಿಸಿ, ಗ್ರಂಥಾಲಯದ ಕಾರ್ಯಕಾರೀ ಸಮಿತಿ ಸದಸ್ಯ ಶಶಿಧರ ಕುದಿಂಗಿಲ ವಂದಿಸಿದರು.