ಉಡುಪಿ: ರೈಸ್ಮಿಲ್ಗೆ ದಾಳಿ ನಡೆಸಿದ ಕಂದಾಯ ನಿರೀಕ್ಷಕರ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಘಟನೆ ಶಿರಿಯಾರ ಎಂಬಲ್ಲಿ ನಡೆದಿದೆ.
ಶಿರಿಯಾರ ಗ್ರಾಮದ ದೇವ ರೈಸ್ ಇಂಡಸ್ಟ್ರೀಸ್ನಲ್ಲಿ ಅಕ್ರಮ ಅಕ್ಕಿ ಸಂಗ್ರಹಿಸಿರುವ ಬಗ್ಗೆ ಮೇಲಾಧಿಕಾರಿಗಳ ಸೂಚನೆಯಂತೆ ಕೋಟ ಹೋಬಳಿಯ ಕಂದಾಯ ನಿರೀಕ್ಷಕ ಮಂಜುನಾಥ ಮಾ.31ರಂದು ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ, ಕುಂದಾಪುರ ಆಹಾರ ನಿರೀಕ್ಷಕ ಸುರೇಶ, ಜೀಪು ಚಾಲಕ ಕಿರಣ್ ಅವರೊಂದಿಗೆ ರೈಸ್ ಮಿಲ್ಗೆ ದಾಳಿ ನಡೆಸಿದ್ದರು.
ಈ ವೇಳೆ ಮಂಜುನಾಥ್ ಜಿಪಿಎಸ್ ಪೋಟೋ ತೆಗೆಯಲು ಮುಂದಾದಾಗ ಆರೋಪಿ ಪ್ರಭಾಕರ ಮೊಬೈಲ್ನ್ನು ಎಳೆದು ಮಂಜುನಾಥ್ ಅವರನ್ನು ದೂಡಿದರೆಂದು ದೂರಲಾಗಿದೆ. ಇದರ ಪರಿಣಾಮ ಮಂಜುನಾಥ್ ಅವರಿಗೆ ನೋವು ಉಂಟಾಗಿದೆ. ಈ ಮೂಲಕ ಪ್ರಭಾಕರ್ ಇಲಾಖಾ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿರುವುದಾಗಿ ಮಂಜುನಾಥ್ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.