ಉಪ್ಪಳ: ಕಾಸರಗೋಡು ಲೋಕಸಭಾ ಕ್ಷೇತ್ರದ ಚುನಾವಣೆಯ ಬಿಜೆಪಿ ಅಭ್ಯರ್ಥಿ ಎಂ.ಎಲ್ ಅಶ್ವಿನಿ ಪಜ್ವ ರವರ ಪ್ರಚಾರಾರ್ಥವಾಗಿ ಮಂಗಲ್ಪಾಡಿ ಪಂಚಾಯತ್‌ನ ಪ್ರತಾಪನಗರದ 89ನೇ ಬೂತ್‌ನಲ್ಲಿ ಮನೆ ಸಂಪರ್ಕ ಅಭಿಯಾನಕ್ಕೆ ಮಾ.ರಂದು ಬೆಳಿಗ್ಗೆ ಚಾಲನೆ ನೀಡಿದ್ದಾರೆ.
ಬಿಜೆಪಿಯ ಹಿರಿಯ ಕಾರ್ಯಕರ್ತ ಚಂದ್ರಹಾಸ ಪೂಜಾರಿ, ಬಿಜೆಪಿ ನೇತಾರ, ಮಾಜಿ ಪಂಚಾಯತ್ ಸದಸ್ಯ ಕೆ.ಪಿ ವಲ್ಸರಾಜ್, ಓಂ ಪ್ರಕಾಶ್, ಅಚ್ಯುತ್ತ, ರವಿ ಕೃಷ್ಣನಗರ ಉಪಸ್ಥಿತರಿದ್ದರು.