ಪುತ್ತೂರು: ನಿಷೇಧ ಹೇರಿದ್ದ ಕೇರಳ ಲಾಟರಿ ಮಾರಾಟ ಮಾಡುತ್ತಿದ್ದ ಇಲ್ಲಿನ ಬೈಪಾಸ್ ಲಿನೆಟ್ ಜಂಕ್ರನ್ನ ಪಾನ್ಬೀಡಾ ಅಂಗಡಿಗೆ ದಾಳಿ ನಡೆಸಿದ ಪುತ್ತೂರು ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕ ನಂದಕುಮಾರ್ ಮತ್ತು ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಿ ಲಾಟರಿ ಟಿಕೆಟ್ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.
ಪಡ್ನೂರು ನಿವಾಸಿ ಲಕ್ಷ್ಮಣ ಬಂಧಿತ ಆರೋಪಿ. ಈತನಿಂದ 1,550 ರೂ.ಮೌಲ್ಯದ 31 ಲಾಟರಿ ಟಿಕೆಟ್ ಮತ್ತು ಲಾಟರಿ ಮಾರಾಟ ಮಾಡಿ ಬಂದ 1,100 ನಗದು ವಶಪಡಿಸಿಕೊಂಡಿದ್ದಾರೆ. ಆರೋಪಿ ವಿರುದ್ಧ ಪೊಲೀಸರು 5,7(3) The lotteries (Regulation) Act 1998 ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.