ಕಾಸರಗೋಡಿಗೆ ಮಾದಕ ವಸ್ತುಗಳು ವ್ಯಾಪಕ ಸಾಗಾಟ; ತಲಪಾಡಿಯಲ್ಲಿ ವಾಹನ ತಪಾಸಣೆ ವೇಳೆ ಹನ್ನೊಂದು ಸಾವಿರ ಪ್ಯಾಕೆಟ್ ತಂಬಾಕು ಉತ್ಪನ್ನ ವಶ ಇಬ್ಬರ ಬಂಧನ

Share with

ಮಂಜೇಶ್ವರ: ಕೇರಳದಲ್ಲಿ ಮಾರಾಟ ನಿಷೇಧಿಸಲಾದ ತಂಬಾಕು ಉತ್ಪನ್ನ ಗಳ ಸಹಿತ ಮಾದಕ ವಸ್ತುಗಳ ಸಾಗಾಟ ಇನ್ನಷ್ಟು ವ್ಯಾಪಕಗೊಂಡಿದೆ ಈಗಾಗಲೇ ಹಲವು ಭಾರಿ ಯಾಗಿ ಭಾರಿ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನು ಜಿಲ್ಲೆಗೆ ಸಾಗಾಟ ಮಾಡುತ್ತಿದ್ದ ವೇಳೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಏಪ್ರಿಲ್ 4 ರಂದು ತಲಪಾಡಿಯಲ್ಲಿ ಮಂಜೇಶ್ವರ ಪೊಲೀಸರ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಕರ್ನಾಟಕದಿಂದ ಇನೋವಾ ಕಾರಿನಲ್ಲಿ ಕಾಸರಗೋಡು ಭಾಗಕ್ಕೆ ಸಾಧಿಸುತ್ತಿದ್ದ 11000 ತಂಬಾಕು ಉತ್ಪನ್ನಗಳನ್ನು ವಶಪಡಿಸಲಾಗಿದೆ.

ಮಂಜೇಶ್ವರ ಪೊಲೀಸರ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಕರ್ನಾಟಕದಿಂದ ಇನೋವಾ ಕಾರಿನಲ್ಲಿ ಕಾಸರಗೋಡು ಭಾಗಕ್ಕೆ ಸಾಧಿಸುತ್ತಿದ್ದ 11000 ತಂಬಾಕು ಉತ್ಪನ್ನಗಳನ್ನು ವಶಪಡಿಸಲಾಗಿದೆ.

ಮಂಜೇಶ್ವರ ಠಾಣೆಯ ಎಸ್ಐ ಸುಮೇಶ್ ರಾಜ್ ರವರ ನೇತೃತ್ವದ ಪೊಲೀಸರು, ಕೇಂದ್ರ ಸೇನೆ ಒಳಗೊಂಡ ತಂಡ ತಲಪಾಡಿಯಲ್ಲಿ ವಾಹನ ತಪಾಸನೆ ನಡೆಸುತ್ತಿದ್ದಾಗ ಆಗಮಿಸಿದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಅದರಲ್ಲಿ ತಂಬಾಕು ಉತ್ಪನ್ನಗಳನ್ನು ಗೋಣಿಚೀಲಗಳಲ್ಲಿ ತುಂಬಿಟ್ಟಿರುವುದು ಕಂಡುಬಂದಿದೆ. ಈ ಸಂಬಂಧ ನೆ ಕ್ರಾಜೆ ಪರಿಸರ ನಿವಾಸಿಗಳಾದ ಮೊಹಮ್ಮದ್ ಸಕೀರ್ (27), ಅಬ್ದುಲ್ ಅಬ್ಬಾಸ್ (29) ಎಂಬವರು ಬಂಧಿತರು.


Share with

Leave a Reply

Your email address will not be published. Required fields are marked *