ಉಪ್ಪಳ: ಪಚ್ಲಂಪಾರೆ ಶ್ರೀ ಚಾಮುಂಡಿ ಗುಳಿಗ ದೈವ ಸನ್ನಿಧಿಯಲ್ಲಿ ಶ್ರೀ ಚಾಮುಂಡೇಶ್ವರೀ ಮತ್ತು ಗುಳಿಗ ಶಕ್ತಿಗಳ ಪ್ರತಿಷ್ಟಾಕಾರ್ಯ ಎ.9ರಂದು ನಡೆಯಲಿದೆ.
ಬೆಳಿಗ್ಗೆ 7ರಿಂದ ಗಣಹೋಮ, ನವಕಕಲಶ, 10.56ರಿಂದ 12.43ರ ಮುಹೂರ್ತದಲ್ಲಿ ಡಾ.ವಿಜಯಪಂಡಿತ್ ಇವರ ದಿವ್ಯ ಹಸ್ತದಿಂದ ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಗುಳಿಗ ದೈವದ ಪ್ರತಿಷ್ಟೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.