ಮಂಜೇಶ್ವರ: ಕಗ್ಗಲ್ಲಿನ ಕೋರೆಯಲ್ಲಿ ಅನಧಿಕೃತವಾಗಿ ಸಂಗ್ರಹಿಡಲಾದ ಸ್ಪೋಟಕ ವಸ್ತುಗಳನ್ನು ಮಂಜೇಶ್ವರ ಪೋಲೀಸರು ವಶಪಡಿಸಿ ಇಬ್ಬರನ್ನು ಬಂಧಿಸಿದ್ದಾರೆ. ಕೊಡ್ಲಮೊಗರು ಸಮೀಪದ ಬೋರ್ಕಳದಲ್ಲಿ ಕಾರ್ಯಾಚರಿಸುತ್ತಿದ್ದ ಕಗ್ಗಲ್ಲಿನ ಕೋರೆಗೆ ಶನಿವಾರ ಸಂಜೆ ಠಾಣೆಯ ಎಸ್.ಐ ಗಳಾದ ಲಿನೇಶ್, ಸುಮೇಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ಕೋರೆಯಲ್ಲಿ ಸಂಗ್ರಹಿಸಿಡಲಾದ ೩೩ ಜಲಾಟಿಕ್ಸ್ಟಿಕ್, ೨೫ ಇಲೆಕ್ಟಿçಕಲ್ ಡಿಕ್ಟನೇಟರ್, ಸ್ವಿಚ್ ಬೋರ್ಡ್, ಕಂಪ್ರರ್ಸರ್ನ್ನು ಪೋಲೀಸರು ವಶಪಡಿಸಿದ್ದಾರೆ. ಈ ಸಂಬAಧ ಕೋರೆಯ ಕಾರ್ಮಿಕರಾದ ಜಾರ್ಕಂಡ್ ನಿವಾಸಿ ಸುಜಿತ್ಟಿಗ್ಗ [೩೦], ಮಲಪುರಂ ನಿವಾಸಿ ಅಬ್ದುಲ್ ಕಾದರ್ [೨೯] ರವರನ್ನು ಸೆರೆಹಿಡಿದಿದ್ದಾರೆ. ಕೇಸು ದಾಖಲಿಸಿದ ಪೋಲೀಸರು ತನಿಖೆ ಮುಂದುವರಿಸಿದ್ದಾರೆ. ಕೋರೆಯ ಮಾಲಕ ಹಾಗೂ ನಡೆಸುತ್ತಿರುವ ವ್ಯಕ್ತಿಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಎಂದು ಪೊಲೀಸರು ತಿಳೀಸಿದ್ದಾರೆ.