ಬಂಟ್ವಾಳ :ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸ್ಪರ್ಧೆ ಮತ್ತು ಸಾಧನಾ ಮನೋಭಾವ ಮೈಗೂಡಿಸಿಕೊಂಡಾಗ ಅವರಲ್ಲಿ ಅಪ್ರತಿಮ ಸಾಧನೆ ಜತೆಗೆ ಸಮಾಜದ ಶಕ್ತಿಯಾಗಿ ಬೆಳೆದು ನಿಲ್ಲಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಬಿ.ಎಸ್.ಸತೀಶ್ ಕುಮಾರ್ ಹೇಳಿದರು. ಸಿದ್ದಕಟ್ಟೆ ಜವನೆರೆ ತುಡರ್ ಟ್ರಸ್ಟ್ ವತಿಯಿಂದ ಸಿದ್ದಕಟ್ಟೆ ಬ್ರಹ್ಮಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ನಡೆದ ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಮತ್ತು ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗಾರ ಮಂಥನ-೨೦೨೩ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಿದ್ದಕಟ್ಟೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ದಿನೇಶ ಸುಂದರ ಶಾಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಸುಪ್ರೀತ್ ಆಳ್ವ, ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಸಂಯೋಜಕ ಪ್ರವೀಣ್ ಕುಮಾರ್, ರಾಯಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ, ಉಪನ್ಯಾಸಕ ಶೀನಪ್ಪ ಎನ್., ರಕ್ಷಾ ರಂಜನ್ ಶೆಟ್ಟಿ, ಪುತ್ತೂರು ಅಂಚೆ ಉಪ ವಿಭಾಗ ಅಧಿಕಾರಿ ಗುರುಪ್ರಸಾದ್ ಕೆ.ಎಸ್, ರಂಜಿತ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರ, ಪ್ರತಿಭಾ ಪುರಸ್ಕಾರ, ಅಂಚೆ ಕಛೇರಿಯ ಸೌಲಭ್ಯಗಳ ಶಿಬಿರ ನಡೆಯಿತು. 280ವಿದ್ಯಾರ್ಥಿಗಳು, 117ರಕ್ತದಾನಿಗಳು, 130 ನಾಗರೀಕರಿಗೆ ಅಂಚೆ ಕಛೇರಿ ಸವಲತ್ತು ಪ್ರಯೋಜನ ಪಡೆದುಕೊಂಡರು.
ಶಾಸಕ ರಾಜೇಶ ನಾಯಕ್ ಉಳಿಪಾಡಿಗುತ್ತು ಮತ್ತು ನಿವೃತ್ತ ಸೇನಾನಿ ಕ್ಯಾ| ಬ್ರಿಜೇಶ್ ಚೌಟ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಸಂಪನ್ಮೂಲ ವ್ಯಕ್ತಿಯಾಗಿ ನಾರಾಯಣ ನಾಯಕ್ ಕರ್ಪೆ, ಅಭಿಜಿತ್ ಕರ್ಕೇರ ಮಂಗಳೂರು, PSI ನಿಧಿ ಬಿ.ಎನ್. ಉಡುಪಿ, ಲೋಹಿತ್ ಕೆ.ಮೂಡಬಿದಿರೆ ಅವರು ಮಾಹಿತಿ ನೀಡಿದರು. ಪುಣ್ಯಭೂಮಿ ತುಳುನಾಡ ಸೇವಾ ಫೌಂಡೇಶನ್ ಸಂಸ್ಥಾಪಕ ಸಮಾಜ ಸೇವಕ ಚಂದ್ರಶೇಖರ ಬಿ.ಸಿ.ರೋಡು ಅವರಿಗೆ ಸೇವಾ ತುಡರ್ ಪುರಸ್ಕಾರ ನೀಡಲಾಯಿತು. ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯ 7ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. 80ಬಾರಿ ರಕ್ತದಾನ ಮಾಡಿದ ಪ್ರಶಾಂತ್ ವಾಸ್ ಹಾಗೂ, ದೇಹದಾನ ನೊಂದಾವಣೆ ಮಾಡಿದ ವಿಶೇಷ ಚೇತನ ಲಕ್ಷ್ಮಣ್ ರಾವ್ ಹಾಗೂ ಅದ್ವೀತೀಯ ಸಾಧನೆಗೈದ ಪೊಲೀಸ್ ಉಪನಿರೀಕ್ಷಕರಾದ ನಿಧಿ ಬಿ ಎನ್ ಇವರನ್ನು ಗೌರವಿಸಲಾಯಿತು.
ಸಮಾರೋಪ: ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಲ್ಲಾಳ್ ಬಾಗ್, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್‌ನ ಅರ್ಜುನ್ ಭಂಡಾರ್ಕರ್, ರೋಟರಿ ಸಹಾಯಕ ಗವರ್ನರ್ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಗಣೇಶ ಶೆಟ್ಟಿ, ಯುವವಾಹಿನಿ ಘಟಕ ಮಾಜಿ ಅಧ್ಯಕ್ಷ ಗಣೇಶ ಪೂಂಜರಕೋಡಿ, ., ಪ್ರಾಧ್ಯಾಪಕ ಚೇತನ್ ಮುಂಡಾಜೆ, ಸಮಾಜ ಸೇವಕ ಪ್ರವೀಣ್ ಮೂಡಿಗೆರೆ, ಹೇಮಂತ್ ಅರಳ ಉಪಸ್ಥಿತರಿದ್ದರು. ಟ್ರಸ್ಟಿ ದಿನೇಶ ಸುವರ್ಣ ಸ್ವಾಗತಿಸಿ, ವಂದಿಸಿದರು. ಪ್ರಜ್ವಲ್ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು.