ಜಲನಿಧಿ ಯೋಜನೆ ಮೂಲೆ ಗುಂಪು: ಪೈವಳಿಕೆ ಪಂಚಾಯತ್ ವ್ಯಾಪ್ತಿಯಲ್ಲಿ ವ್ಯಾಪಕಗೊಂಡ ಕುಡಿನೀರಿನ ಸಮಸ್ಯೆ

Share with

ಜಲನಿಧಿ ಯೋಜನೆ ಮೂಲೆ ಗುಂಪು

ಪೈವಳಿಕೆ : ಪೈವಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿನೀರಿನ ಸಮಸ್ಯೆ ವ್ಯಾಪಕಗೊಂಡಿದ್ದು, ಊರವರು ನೀರಿಗಾಗಿ ಪರದಾಡುವಂತ ಅವಸ್ಥೆ ಉಂಟಾಗಿರುವುದಾಗಿ ದೂರಲಾಗಿದೆ. ವಾರ್ಡ್ಗಳಲ್ಲಿ ಹಲವು ಸರಕಾರಿ ಬಾವಿಗಳಿದ್ದರೂ ಅದನ್ನು ದುರಸ್ಥಿಗೊಳಿಸದ ಕಾರಣ ಉಪಯೋಗ ಶೂನ್ಯಗೊಂಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಗ್ರಾಮೀಣ ಪ್ರದೇಶದ ಜನರು ನೀರಿಗಾಗಿ ಸಂಕಷ್ಟವನ್ನು ಅನುಭವಿಸುತ್ತಿದ್ದು, ಪಂಚಾಯತ್‌ನಿoದ ಕುಡಿನೀರು ವಿತರಿಸುವ ಕ್ರಮಕ್ಕೆ ಅಧಿಕಾರಿಗಳು ಮುಂದಾಗಬೇಕೆoದು ಒತ್ತಾಯಿಸಿದ್ದಾರೆ.

ಸುಮಾರು 10 ವರ್ಷಗಳ ಹಿಂದೆ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿನೀರಿಗಾಗಿ ಹೊರಡಿಸಿದ ಜಲನಿಧಿ ಯೋಜನೆ ಮೂಲೆಗುಂಪಾಗಿದ್ದು, ಕೆಲವು ವಾರ್ಡ್ಗಳಲ್ಲಿ ಮಾತ್ರವೇ ಯೋಜನೆ ಜಾರಿಯಲ್ಲಿದೆ. ಪೈಪ್ ಲೈನ್ ಅಳವಡಿಕೆಯಲ್ಲಿ ಲೋಪ ಉಂಟಾದ ಕಾರಣ ಜಲನಿಧಿ ಯೋಜನೆಯ ನೀರು ವಿತರಣೆ ಮೊಟಕುಗೊಳ್ಳಲು ಕಾರಣವೆನ್ನಲಾಗಿದೆ. ಯೋಜನೆ ಆರಂಭಿಸಿ ಕೆಲವೇ ತಿಂಗಳು ಮಾತ್ರ ಪ್ರಯೋಜನೆ ಉಂಟಾಗಿದೆನ್ನಲಾಗಿದೆ. ಯೋಜನೆಗೆ ಕಳಾಯಿ ಹೊಳೆಯಲ್ಲಿ ನಿರ್ಮಿಸಲಾದ ಬಾವಿ, ಪಂಪ್ ಶೆಡ್ಡ್ ಮೂಲೆಗುಂಪಾಗಿ ಹೋಗಿದೆ. ಸ್ಥಳೀಯರು ನೀರಿಗಾಗಿ ಈ ಹಿಂದೆ ನೀಡಿದ ಹಣ ನಷ್ಟಹೊಂದಿದೆ.

ಪಂಚಾಯತ್ ವ್ಯಾಪ್ತಿಯಲ್ಲಿ ಜಲ ಜಿವನ್ ಮಿಷನ್‌ನ ಯೋಜನೆಯಲ್ಲಿ ಯಾದರೂ ನಿರು ಲಭಿಸಬಹುದೆಂಬ ಊರವರ ಕನಸು ಇನ್ನೂ ಅಲ್ಲಿಯೆ ಉಳಿದುಕೊಂಡಿದೆ. ಈ ಪದ್ದತಿಗೆ ಅರ್ಜಿ ಮಾತ್ರವೇ ಸ್ವೀಕರಿಸಲಾಗಿದ್ದು, ಮುಂದಿನ ಕೆಲಸ ಕಾರ್ಯಗಳು ನಡೆಯುತ್ತಿಲ್ಲವೆಂದು ದೂರಲಾಗಿದೆ. ಸಂಬoಧ ಪಟ್ಟ ಪಂಚಾಯತ್, ಹಾಗೂ ಮೇಲಾಧಿಕಾರಿಗಳು ಕುಡಿನೀರಿನ ಸಮಸ್ಯೆಯನ್ನು ಅತೀ ಶೀಘ್ರವಾಗಿ ಪರಿಹರಿಸಬೇಕೆಂದು ಒತ್ತಾಯಿಸಿದ್ದಾರೆ.


Share with

Leave a Reply

Your email address will not be published. Required fields are marked *