ತಾಲೂಕು ಆಸ್ಪತ್ರೆ ಸಹಿತ ಹಲವಾರು ಸರಕಾರಿ ಕಚೇರಿಗಳು ಹೊಂದಿರುವ ಜನನಿಬಿಡ ಪ್ರದೇಶ ನಯಬಜಾರ್ ನಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಒತ್ತಾಯ

Share with

ಉಪ್ಪಳ : ನಯಬಜಾರ್‌ನಲ್ಲಿ ಅಂಡರ್‌ಪಾಸ್ ನಿರ್ಮಿಸದೆ ಇರುವುದು ಈ ಪ್ರದೇಶದ ಜನರ ಸಂಚಾರಕ್ಕೆ ಸಮಸ್ಯೆ ಉಂಟಾಗಿದ್ದು, ಕೂಡಲೇ ಅಂಡರ್‌ಪಾಸ್ ನಿರ್ಮಿಸಬೇಕೆಂದು ಜನರ ಬೇಡಿಕೆ ವ್ಯಾಪಕಗೊಂಡಿದ್ದು, ಪ್ರತಿಭಟನೆಗೂ ಸಿದ್ದತೆ ನಡೆಯುತ್ತಿದೆ. ನಯಬಜಾರ್‌ನಲ್ಲಿ ಒಂದು ಭಾಗದಲ್ಲಿ ಮಂಗಲ್ಪಾಡಿ ತಾಲೂಕು ಆಸ್ಪತ್ರೆ, ವಿಲೇಜ್, ಕಚೇರಿ, ಶಿಕ್ಷಣಾಧಿಕಾರಿ ಕಚೇರಿ, ಮಂಗಲ್ಪಾಡಿ ಪಂಚಾಯತ್, ಸರಕಾರಿ, ಖಾಸಾಗಿ ಶಾಲೆಗಳು, ಆರಾದಾನಾಲಯಗಳು ಇದೆ. ಇದೇ ರೀತಿ ಇನ್ನೊಂದು ಭಾಗದಲ್ಲಿ ಅಗ್ನಿಶಾಮಕ ದಳ ಕೇಂದ್ರ, ಮೃಗಾಸ್ಪತ್ರೆ, ಕೃಷಿ ಕಚೇರಿ ಗಳು, ಆರಾಧನಾಲಯಗಳ ಸಹಿತ ಅತ್ಯಗತ್ಯದ ಸಂಸ್ಥೆಗಳು ಹೊಂದಿರುವ ಪ್ರದೇಶವಾಗಿದೆ.

Akashaya College

ಪ್ರಧಾನವಾಗಿ ಆಸ್ಪತ್ರೆ ಸಹಿತ ಅತ್ಯಗತ್ಯದ ಸಂಸ್ಥೆಗಳಿಗೆ ಸುತ್ತಾಗಿ ತೆರಳಬೇಕಾಗಿದೆ. ಇದರಿಂದ ಮಹಿಳೆಯರು, ವೃದ್ದರ ಸಹಿತ ಜನರ ಸಂಚಾರ ದುಸ್ಥರವಾಗಿರುವುದಾಗಿ ದೂರಲಾಗಿದೆ. ಸಾವಿರಾರು ಮಂದಿ ದಿನನಿತ್ಯ ಓಡಡುವ ನಯಬಜಾರ್ ಪ್ರದೇಶದಲ್ಲಿ ಅಂಡರ್‌ಪಾಸ್ ನಿರ್ಮಿಸುವ ಬದಲು ನಯಬಜಾರ್‌ನ ಅಲ್ಪ ದೂರದಲ್ಲಿ ನಿರ್ಮಿಸಿದ ಅಂಡರ್‌ಪಾಸ್ ಅವ್ಯವಸ್ಥೆಯಿಂದ ಕೂಡಿರುವುದಾಗಿ ವಾಹನಗಳ ಸಂಚಾರಕ್ಕೆ ಆತಂಕ ಉಂಟಾಗುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ನಯಬಜಾರ್ ಪೇಟೆಯಲ್ಲಿಯೇ ಅಂಡರ್‌ಪಾಸ್ ನಿರ್ಮಿಸಬೇಕೆಂದು ಬೇಡಿಕೆಯಿಟ್ಟಿದ್ದು, ಊರವರು ಒಟ್ಟು ಸೇರಿ ಪ್ರತಿಭಟನೆ ಮಾಡುವ ಸಿದ್ದತೆಯಲ್ಲಿದ್ದಾರೆ.


Share with

Leave a Reply

Your email address will not be published. Required fields are marked *