ಪುಣಚ ವಲಯ ಕಾಂಗ್ರೆಸ್ ಸಮಿತಿ ಕಾರ್ಯಕರ್ತರ ಸಭೆ

Share with

ವಿಟ್ಲ : ಪುಣಚ ವಲಯ ಕಾಂಗ್ರೆಸ್ ಸಮಿತಿ ಕಾರ್ಯಕರ್ತರ ಸಭೆ ನೀರುಮಜಲು ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ವಠಾರದಲ್ಲಿ ನಡೆಯಿತು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾವು ಕೊಟ್ಟ ಐದು ಗ್ಯಾರಂಟಿ ಭರವಸೆಯನ್ನು ಈಡೇರಿಸಿದ್ದೇವೆ ,ಕೊಟ್ಟ ಮಾತನ್ನು ಉಳಿಸಿಕೊಂಡ ನಾವು ಈ ಬಾರಿ ಓಟು ಕೇಳುವಾಗ ಜನರ ಮುಂದೆ ಹೇಳುತ್ತಿದ್ದೇವೆ ಆದರೆ ಬಿಜೆಪಿಯವರಿಗೆ ಹೇಳಿಕೊಳ್ಳಲು ಏನೂ ಇಲ್ಲ.
ಗ್ಯಾರಂಟಿಯ ಬಗ್ಗೆ ಅಪಹಾಸ್ಯ‌ ಮಾಡುತ್ತಿದ್ದ ಬಿಜೆಪಿಯವರು ಕಾಂಗ್ರೆಸ್ ಸುಳ್ಳು ಹೇಳುತ್ತಿದೆ ಎಂದು ಹೇಳುತ್ತಿದ್ದರು ಆದರೆ ಗ್ಯಾರಂಟಿ ಪಡೆದುಕೊಳ್ಳಲು ಬಿಜೆಪಿಯವರು ಮೊದಲ ಸಾಲಿನಲ್ಲಿದ್ದರು ಎಂದು ಅಣಕಿಸಿದರು.
ಕಳೆದ ಏಳು ತಿಂಗಳಿಂದ ಕರ್ನಾಟಕ ಪ್ರತೀ‌ಮನೆಯಲ್ಲಿ ನೆಮ್ಮದಿಯ ವಾತಾವರಣ ಇದೆ, ಹಸಿವು ಮುಕ್ತ ರಾಜ್ಯವಾಗಿ ನಮ್ಮ‌ಕರ್ನಾಟಕ ಮುಂದೆ ಸಾಗುತ್ತಿದೆ. ಕಾಂಗ್ರೆಸ್ ಎಂದಿಗೂ ಬಡವರ ಪರ ಎಂಬುದನ್ನು ಗ್ಯಾರಂಟಿ ಸಾಬೀತು ಮಾಡಿದೆ. ಸಮಾಜದಲ್ಲಿ‌ ಕೋಮು ವಿಷ ಬೀಜ ಬಿತ್ತಿ ಅಧಿಕಾರ ಪಡೆಯುವುದೇ ಬಿಜೆಪಿ ಅಜೆಂಡವಾಗಿದೆ ಎಂದರು.
ಈ ಬಾರಿ ಬಿಜೆಪಿಯ ನಕಲಿ ಹಿಂದುತ್ವಕ್ಕೆ ಯಾರೂ ಬಲಿಯಾಗಬಾರದು. ಚುನಾವಣೆಗೋಸ್ಕರ ಹಿಂದೂ‌ ಮುಸ್ಲಿಂ ವಿಚಾರ ಮುಂದಿಟ್ಟು ಓಟು ಪಡೆಯುವ ಪ್ರಯತ್ನ ಮಾಡುತ್ತಿದೆ. ಬಿಜೆಪಿಯವರದ್ದು ನಕಲಿ ಹಿಂದುತ್ವವಾಗಿದೆ. ಎಲ್ಲರಲ್ಲೂ ಬಂಧುತ್ವವನ್ನು ಕಾಣುವುದೇ ನಿಜವಾದ ಹಿಂದುತ್ವವಾಗಿದೆ ಎಂದು ಹೇಳಿದರು.
ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ.‌ರಾಜಾರಾಂ ಕೆ.ಬಿ ಮಾತನಾಡಿ ಜನರಿಗೆ ನುಡಿದಂತೆ ಕರ್ನಾಟಕದ ಕಾಂಗ್ರೆಸ್ ಸರಕಾರ ನಡೆದುಕೊಂಡಿದೆ. ಸುಳ್ಳು ಭರವಸೆಗಳನ್ನು ನೀಡಿ ಜನರಿಗೆ ಬಿಜೆಪಿ ಸರ್ಕಾರ ವಂಚಿಸುತ್ತಿದೆ. ಕಾರ್ಪೋರೇಟರ್ಗಳ ಕೈಗೆ ದೇಶವನ್ನು ಮಾರುತ್ತಿದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಜನ ಸುಭೀಕ್ಷ ಜೀವನ ನಡೆಸುತ್ತಿದ್ದಾರೆ. ಅಶಕ್ತರು, ದೀನರು, ಗೃಹಿಣಿಯರು ಸಂತೃಪ್ತರಾಗಿದ್ದಾರೆ ಎಂದರು.

ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ನಝೀರ್ ಮಠ ಮಾತನಾಡಿ ಬಿಜೆಪಿ ಸರಕಾರದ ದುರಾಡಳಿತದ ಬಗ್ಗೆ ಮಾಹಿತಿ ನೀಡಿದರು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿಯವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಿವೃತ್ತ ಬ್ಯಾಂಕ್ ಉದ್ಯೋಗಿ ರಾಮಣ್ಣ ನಾಯ್ಕ ಮತ್ತು ರೈಲ್ವೇ ಉದ್ಯೋಗಿ ಮಹಾಲಿಂಗ ನಾಯ್ಕರು ಪಕ್ಷಕ್ಕೆ ಸೇರ್ಪಡೆಯಾದರು. ಶಾಸಕರು ಪಕ್ಷದ ಧ್ವಜವನ್ನು ನೀಡಿ ಬರಮಾಡಿಕೊಂಡರು.

ವೇದಿಕೆಯಲ್ಲಿ ಉಸ್ತುವಾರಿಗಳಾದ ಮುರಳೀದರ್ ರೈ ಮಠಂತಬೆಟ್ಟು, ಪ್ರವೀಣ್ ಚಂದ್ರ ಆಳ್ವ, ವಲಯ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ನೂರುದ್ದೀನ್ ಸಾಲ್ಮರ, ರಮಾನಾಥ ವಿಟ್ಲ, ಸಿರಾಜ್ ಮಣಿಲ, ಹನೀಫ್, ನಾರಾಯಣ ಪೂಜಾರಿ ಗರಡಿ, ಅಲ್ಬರ್ಟ್ ಡಿಸೋಜಾ, ಕ್ಸೇವಿಯರ್ ಡಿಸೋಜಾ, ದಿವಾಕರ್ ನಾಯಕ್, ಹರೀಶ್ ಪೂಜಾರಿ ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *