ಮಂಜೇಶ್ವರ: ಕಾಸರಗೋಡು ಲೋಕಸಭಾ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ವಾರೆಂಟ್ ಆರೋಪಿಗಳ ಸೆರೆಗೆ ಕ್ರಮಕೈಗೊಂಡಿರುವಂತೆ ಮಂಜೇಶ್ವರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ವಾರಗಳಲ್ಲಿ ಸುಮಾರು 40ರಷ್ಟು ವಾರೆಂಟ್ ಆರೋಪಿಗಳನ್ನು ಸೆರೆಹಿಡಿಯಲಾಗಿದೆ.
ಕಾಸರಗೋಡು ಡಿ.ವೈ.ಎಸ್.ಪಿ ಹರಿಪ್ರಸಾದ್ ರವರ ನಿರ್ದೇನದಂತೆ ಮಂಜೇಶ್ವರ ಠಾಣೆಯ ಇನ್ಸ್ಫೆಕ್ಟರ್ ಕೆ.ರಾಜೀವ್ ಕುಮಾರ್ ರವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಎಲ್ಲಾ ಠಾಣೆಗಿಂತ ಮಂಜೇಶ್ವರದಲ್ಲಿ ಅತ್ಯಧಿಕ ಅರೋಪಿಗಳನ್ನು ಸೆರೆಹಿಡಿದಿದ್ದಾರೆ. ಕಳವು, ಹಲ್ಲೆ, ಅಮಲು ಪದಾರ್ಥ ಸೇವನೆ, ಪೊಕ್ಸೋ ಮೊದಲಾದ ಪ್ರಕರಣಗಳಲ್ಲಿ ವಾರಂಟ್ ಆರೋಪಿಗಳನ್ನು ಸೆರೆಹಿಡಿದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಇದರಲ್ಲಿ ಕೆಲವರು ರಿಮಾಂಡ್‌ಗೊಳಗಾಗಿದ್ದು, ಇನ್ನು ಕೆಲವರಿಗೆ ಜಾಮೀನು ಲಭಿಸಿರುವುದಾಗಿ ಪೋಲೀಸರು ತಿಳಿಸಿದ್ದಾರೆ. ಇನ್ನು ಕೂಡಾ ಹಲವಾರು ವಾರೆಂಟ್ ಆರೋಪಿಗಳಿಗಾಗಿ ಪೊಲೀಸರು ರಾತ್ರಿ, ಹಗಲು ಶೋಧ ನಡೆಸುತ್ತಿದ್ದಾರೆ.