ಉಡುಪಿ: ರಾಮನವಮಿ ಪ್ರಯುಕ್ತವಾಗಿ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು ಅವರ ಆಯೋಜನೆಯಲ್ಲಿ ನಗರದ ಮಾರುಥಿ ವೀಥಿಕಾದಲ್ಲಿ ಏಪ್ರಿಲ್ 17ರಂದು ರಾಮನವಮಿ ಪಾನಕ ವಿತರಣೆ ಮಾಡಲಾಯಿತು.
ಅಯೋಧ್ಯೆಯಲ್ಲಿ ರಾಮದೇವರಿಗೆ ಅಭೀಷೇಕಕ್ಕೆ ಬಳಸಲ್ಪಟ್ಟಿರುವ ರಜತ ಕಳಶದಿಂದ ನಗರ ಪೋಲಿಸ್ ಠಾಣೆಯ ಎಸ್.ಐ ಪುನೀತ್ ಕುಮಾರ್ ಅವರು ಸಾರ್ವಜನಿಕರಿಗೆ ಪಾನಕ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜೋಸ್ ಆಲೂಕ್ಕಾಸ್ ಆಭರಣ ಮಳಿಗೆಯ ವ್ಯವಸ್ಥಾಪಕ ರಾಜೇಶ್ ಎನ್.ಆರ್, ಗೋಪಾಲ್, ಮಿತ್ರ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು, ನಗರ ಠಾಣೆಯ ಗಂಗರಾಜ್ ಏನ್,ನಾಗರಿಕ ಸಮಿತಿಯ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾಳು ಮೆಣಸು, ಲಿಂಬು, ಏಲಕ್ಕಿ, ಮಂಡ್ಯದ ಬೆಲ್ಲ, ಶುಂಠಿ ಮೊದಲಾದ ದ್ರವ್ಯಗಳನ್ನು ಬಳಸಿ ನುರಿತ ಪಾಕ ತಜ್ಞರಿಂದ ಪಾನಕ ತಯಾರಿಸಲಾಗಿತ್ತು. ಸಾವಿರಕ್ಕೂ ಅಧಿಕ ಜನರು ರಾಮನವಮಿ ಪಾನಕ ಸವಿದು ಸಂತೋಷಪಟ್ಟರು.