ಉಡುಪಿ: ಅಪ್ಪಾಜಿ (ರಾಜ್ ಕುಮಾರ್) ಗೆ ವೈಯಕ್ತಿಕವಾಗಿ ರಾಜಕೀಯ ಇಷ್ಟ ಇರಲಿಲ್ಲವೇ ಹೊರತು ಆಸಕ್ತಿ ಇದ್ದವರಿಗೆ ರಾಜಕೀಯಕ್ಕೆ ಹೋಗಲೇ ಬೇಡಿ ಎಂದವರಲ್ಲ. ಅವರಿಗೆ ರಾಜಕೀಯ ಇಷ್ಟ ಇಲ್ಲದಿದ್ದರೆ ಯಾಕೆ ಓಟು ಹಾಕುತ್ತಿದ್ದರು. ಅದೇ ರೀತಿ ಅವರಿಗೆ ರಾಜಕೀಯ ಹಿನ್ನೆಲೆಯೇ ಬೇಡದಿದ್ದರೆ ಬಂಗಾರಪ್ಪ ಕುಟುಂಬದಿಂದ ಹೆಣ್ಣು ಯಾಕೆ ತರಬೇಕಿತ್ತು ಎಂದು ನಟ ಶಿವರಾಜ್ ಕುಮಾರ್ ಪ್ರಶ್ನಿಸಿದ್ದಾರೆ.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ ಕುಟುಂಬಕ್ಕೆ ರಾಜಕೀಯ ಮಾಡುವ ಉದ್ದೇಶ ಇಲ್ಲ. ಚಿತ್ರರಂಗದಲ್ಲಿ ಒಳ್ಳೆಯ ಸ್ಥಾನ ಕೊಟ್ಟಿದ್ದಾರೆ. ಗೀತಾ ಅವರಿಗೆ ಒಂದು ಅವಕಾಶ ನೀಡಿ ಎಂದು ಮನವಿ ಮಾಡಿದರು.