ಉಪ್ಪಳ: ಇಲ್ಲಿನ ಶ್ರೀ ಭಗವತೀ ದ್ವಾರದ ಬಳಿ ಶಿವಶಕ್ತಿ ನಗರದ ಶ್ರೀ ಸದಾಶಿವ ದೇವಸ್ಥಾನದಲ್ಲಿ ಶ್ರೀ ದೇವರ ಮತ್ತು ಪರಿವಾರ ದೇವರುಗಳ ಪ್ರತಿಷ್ಟಾ ವರ್ಧಂತಿ ಹಾಗೂ ವಾರ್ಷಿಕ ಜತ್ರಾ ಮಹೋತ್ಸವದ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಿದ ಮೇಲ್ಚಾವಣಿಯ ಉದ್ಘಾಟನಾ ಸಮಾರಂಭವನ್ನು ಸೋಮವಾರ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ದೀಪ ಪ್ರಜ್ವಲನೆಗೊಳಿಸುವ ಮೂಲಕ ಉದ್ಘಾಟಿಸಿ, ಆಶೀರ್ವಚನ ನೀಡಿದರು. ಐಲ ಕ್ಷೇತ್ರದ ಆಡಳಿತ ಮೊಕ್ತೇಸರ ನಾರಾಯಣ ಹೆಗ್ಡೆ ಕೋಡಿಬೈಲು ಅಧ್ಯಕ್ಷತೆ ವಹಿಸಿದರು. ಶಂಕರನಾರಾಯಣ ಹೊಳ್ಳ ಮಜಲು, ಮಧುಸೂದನ ಅಯ್ಯರ್ ಮಂಗಳೂರು, ಲಕ್ಷ್ಮೀಶ ರಾವ್ ಕಡಂಬಾರು, ಮೋಹನ್ ಶೆಟ್ಟಿ ಕುಳೂರು ಮಜ್ಜಾರ್, ಹರಿನಾಥ ಭಂಡಾರಿ, ಯು.ಜಯರಾಮ, ಸುಂದರ ಭಟ್ ಕೋಟೆಕಾರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಸಂಪ್ರೀತ ಮಯ್ಯ ಪ್ರಾರ್ಥನೆ ಹಾಡಿದರು. ಪ್ರಭಾಕರ ಶೆಟ್ಟಿ ಸ್ವಾಗತಿಸಿ, ಶಿವರಾಮ ಪಕಳ ವಂದಿಸಿದರು. ಹರೀಶ್ ಶೆಟ್ಟಿ ಮಾಡ ನಿರೂಪಿಸಿದರು.