ಮಂಜೇಶ್ವರ: ಅರಿಬೈಲು ಶ್ರೀ ನಾಗಬ್ರಹ್ಮ ದೇವಸ್ಥಾನದ ಪ್ರಧಾನ ಅರ್ಚಕರು, ಆಡಳಿತ ಮೊಕ್ತೇಸರರೂ ಆದ ಅರಿಬೈಲು ನಿವಾಸಿ ಎ. ರಾಧಾಕೃಷ್ಣ ಅರಿನಾಯ [೮೦] ಹೃದಯಘಾತದಿಂದ ಬೆಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ಕುಸುಮ, ಮಕ್ಕಳಾದ ಸೌಮ್ಯ, ಸುಹಾಸ್, ಅಳಿಯ ಚೇತನ್, ಸಹೋದರ ರಾಮ್‌ಮೋಹನ್, ಸಹೋದರಿ ಸುಧಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಿಧನಕ್ಕೆ ಧಾರ್ಮಿಕ ಮುಂದಾಳು ಗೋಪಾಲ ಶೆಟ್ಟಿ ಅರಿಬೈಲು ಸಂತಾಪ ಸೂಚಿಸಿದ್ದಾರೆ.