ಅರಿಬೈಲು ಬರ್ವ ದೈವಸ್ಥಾನದಲ್ಲಿ ದೈವಗಳ ಪ್ರತಿಷ್ಟಾ ಬ್ರಹ್ಮಕಲಶೋತ್ಸವ

Share with

ಮಂಜೇಶ್ವರ: ಅರಿಬೈಲು ಬರ್ವ ಬಂಗೇರ ತರವಾಡು ಧರ್ಮ ದೈವ ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ದೈವಗಳ ಪ್ರತಿಷ್ಟಾ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ, ಕೋಲೋತ್ಸವ ಇಂದಿನಿAದ ಆರಂಭಗೊAಡಿದ್ದು, ಈ ತಿಂಗಳ ೨೭ರ ತನಕ ನಡೆಯಲಿದೆ. ಇಂದು [೨೫-೪-೨೦೨೪] ಬೆಳಿಗ್ಗೆ ನಾಗ ತಂಬಿಲ, ದೈವಗಳಿಗೆ ತಂಬಿಲ ನಡೆಯಿತು. ಸಂಜೆ ೫.೩೦ಕ್ಕೆ ತಂತ್ರಿಗಳ ಆಗಮನ, ೬.೩೦ಕ್ಕೆ ವಿವಿಧ ವೈಧಿಕ ಕಾರ್ಯಕ್ರಮಗಳು, ೨೬ರಂದು ಬೆಳಿಗ್ಗೆ ೭.೩೦ಕ್ಕೆ ಮಹಾಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಅಧಿವಾಸ ಹೋಮ, ಬೆಳಿಗ್ಗೆ ೧೧.೩೮ರಿಂದ ೧೨.೩೦ರ ಒಳಗೆ ಧರ್ಮದೈವ ಶ್ರೀ ಧೂಮಾವತಿ, ಕಲ್ಲಾಲ್ದ ಗುಳಿಗ, ಪಂಜುರ್ಲಿ, ಭೈರವ ದೈವಗಳ ಪ್ರತಿಷ್ಟಾ ಬ್ರಹ್ಮಕಲಶೋತ್ಸವ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಧರ್ಮಸ್ಥಳ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್ ಇಲ್ಲಿನ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಯವರಿಂದ ಆಶೀರ್ವಚನ, ಮಧ್ಯಾಹ್ನ ಅನ್ನಸಂತರ್ಪಣೆ ಅಪರಾಹ್ನ ೩ರಿಂದ ಭಜನೆ, ಸಂಜೆ ೬ಕ್ಕೆ ಕಲ್ಲಾಲ್ದ ಗುಳಿಗ, ಕಲ್ಲುರ್ಟಿ ಪಂಜುರ್ಲಿ ದೈವದಗಳ ಭಂಡಾರ ಏರುವುದು, ೬.೩೦ರಿಂದ ಕಲ್ಲಾಲ್ದ ಗುಳಿಗ ದೈವದ ಕೋಲೋತ್ಸವ, ರಾತ್ರಿ ಅನ್ನಸಂತರ್ಪಣೆ, ೯ಕ್ಕೆ ಕಲ್ಲುರ್ಟಿ, ಪಂಜುರ್ಲಿ ದೈವಗಳ ಕೋಲೋತ್ಸವ, ೨೭ರಂದು ಬೆಳಿಗ್ಗೆ ೬ಕ್ಕೆ ಧರ್ಮ ದೈವ ಶ್ರೀ ಧೂಮಾವತಿ ದೈವದ ಭಂಡಾರ ಏರುವುದು, ೧೦ರಿಂದ ಧರ್ಮ ದೈವ ಶ್ರೀ ಧೂಮಾವತಿ ದೈವದ ನೇಮೋತ್ಸವ, ಸಿರಿಗಂಧ ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ೫ರಿಂದ ಧರ್ಮದೈವ ಶ್ರೀ ಧೂಮಾವತಿ, ಕಲ್ಲಾಲ್ದ ಗುಳಿಗ, ಅನ್ನಪ್ಪ ಪಂಜುರ್ಲಿ, ಕಲ್ಲುರ್ಟಿ ಪಂಜುರ್ಲಿ ಪರಿವಾರ ದೈವಗಳಿಗೆ ತಂಬಿಲ ಸೇವೆ, ರಾತ್ರಿ ೭ಕ್ಕೆ ಕೊರಹಜ್ಜ ದೈವದ ಕೋಲೋತ್ಸವ, ಅನ್ನಸಂತರ್ಪಣೆ, ರಾತ್ರಿ ೧೦ರಿಂದ ನಾಟಕ ಪ್ರದರ್ಶನಗೊಳ್ಳಲಿದೆ.


Share with

Leave a Reply

Your email address will not be published. Required fields are marked *