ಉಡುಪಿ: ಉಡುಪಿಯ ಸೈಂಟ್ ಸಿಸಿಲೀಸ್‌ನಲ್ಲಿರುವ ಸ್ಟ್ರಾಂಗ್ ರೂಮ್ ನಲ್ಲಿ ಕ್ಷೇತ್ರದ ಹತ್ತು ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ. ಸ್ಟ್ರಾಂಗ್ ರೂಮ್ ಗೆ ಮೂರು ಹಂತದಲ್ಲಿ ಭದ್ರತೆ ಒದಗಿಸಲಾಗುತ್ತಿದೆ. ಮೊದಲ ಹಂತದಲ್ಲಿ ಸೆಂಟರ್ ಆರ್ಮ್ಸ್ ಪೊಲೀಸ್ ಪೋರ್ಸ್, ಎರಡನೇ ಹಂತದಲ್ಲಿ ಕೆಎಸ್‌ಆರ್‌ಪಿ, ಮೂರನೇ ಹಂತದಲ್ಲಿ ಜಿಲ್ಲೆಯ ಪೊಲೀಸರು ಭದ್ರತೆ ನೀಡಲಿದ್ದಾರೆ. ಇವರು ದಿನಕ್ಕೆ ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಎಲ್ಲ ವಿಧಾನಸಭಾ ಕ್ಷೇತ್ರಗಳ ಇವಿಎಂ ಗಳು ನಿನ್ನೆಯೇ ಸ್ಟ್ಯಾಂಗ್ ರೂಂ ತಲುಪಿವೆ.ಕೇಂದ್ರದ ಸುತ್ತ ಸೆಕ್ಷನ್ ಜಾರಿ ಮಾಡಲಾಗಿದ್ದು ಪೊಲೀಸರು ಹದ್ದಿನ ಕಣ್ಣು ಇರಿಸಿದ್ದಾರೆ.