ವಿವಿಧ ಕಡೆಗಳ ಬೂತ್‌ಗಳಲ್ಲಿ ರಾತ್ರಿ ತನಕ ಮುಂದುವರಿದ ಮತದಾನ

Share with

ಉಪ್ಪಳ: ಕಾಸರಗೋಡು ಲೋಕಸಭಾ ಕ್ಷೇತ್ರದ ಚುನಾವಣೆ ಶುಕ್ರವಾರ ನಡೆಯಿತು. ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೆ ಮತದಾನ ಯಶಸ್ವಿಯಾಗಿ ನಡೆದಿರುವುದಾಗಿ ತಿಳಿದುಬಂದಿದೆ. ಮಂಜೇಶ್ವರ, ಕುಂಬಳೆ ಪೋಲೀಸ್ ಅಧಿಕಾರಿಗಳ ನೇತೄತ್ವದಲ್ಲಿ ವಿವಿಧ ಮತಗಟ್ಟಲೆಯಲ್ಲಿ ಭಾರೀ ಬಂದೋಬಸ್ತ್ ಗೊಳಿಸಿದ್ದರು. ಆದರೆ ಬೆಳಿಗ್ಗೆ ೭ರಿಂದ ಸಂಜೆ ೬ಗಂಟೆಗೆ ಮುಕ್ತಾಯಗೊಳ್ಳದೆ ಮತದಾನ ವಿವಿಧ ಪಂಚಾಯತ್‌ನ ಹಲವು ಬೂತ್‌ಗಳಲ್ಲಿ ರಾತ್ರಿ ತನಕ ಮತದಾನ ಮುಂದುವರಿದಿರುವುದಾಗಿ ತಿಳಿದುಬಂದಿದೆ.

ಕೆಲವು ಬೂತ್‌ಗಳಲ್ಲಿ ಉದ್ಯೋಗಸ್ಥರ ಕೊರತೆ, ಇನ್ನು ಹೆಚ್ಚಿನ ಮತದಾರರು ವಿವಿಧ ಕಾರ್ಯಕ್ರಮಗಳನ್ನು ಮುಗಿಸಿ ಮಧ್ಯಾಹ್ನದ ಬಳಿಕ ಮತಗಟ್ಟಲೆಗೆ ತೆರಳಿದ್ದು, ಇದರಿಂದ ಭಾರೀ ಸರದಿ ಸಾಲು ಕಂಡು ಬಂದಿದ್ದು, ಇದರಿಂದ ರಾತ್ರಿ ತನಕ ಮುಂದುವರಿಯಲು ಕಾರಣವೆನ್ನಲಾಗಿದೆ. ಪೈವಳಿಕೆ, ಮೀಂಜ, ಮಂಜೇಶ್ವರ, ವರ್ಕಾಡಿ, ಮಂಗಲ್ಪಾಡಿ ಪಂಚಾಯತ್‌ಗಳ ವಿವಿಧ ಬೂತ್ ಗಳಲ್ಲಿ ೬ಗಂಟೆ ಬಳಿಕವು ಮತದಾರರು ಸರದಿ ಸಾಲಿನಲ್ಲಿ ಕಂಡುಬಂದಿದ್ದು, ಅವರಿಗೆ ಟೋಕನ್ ನೀಡಿ ಮತದಾನಕ್ಕೆ ಅವಕಾಶಕ್ಕೆ ಮಾಡಲಾಗಿದೆ.

ಪೈವಳಿಕೆ ಪಂಚಾಯತ್‌ನ ಬಾಯಾರು ಆವಳ ಎ.ಎಲ್.ಪಿ ಶಾಲೆಯ ೧೨೩ನೇ ಬೂತ್‌ನಲ್ಲಿ ೬ಗಂಟೆಗೆ ಸುಮಾರು ೨೦೦ ಮಂದಿ ಉಳಿದುಕೊಂಡಿದೆ. ಅವರಿಗೆ ಟೋಕನ್ ನೀಡಲಾಗಿದೆ. ರಾತ್ರಿ ೧೦ಗಂಟೆಗೆ ಮತದಾನ ಮುಕ್ತಾಯಗೊಂಡಿದೆ. ಇದೇ ರೀತಿ ಚೇವಾರು ಶಾಲೆಯಲ್ಲಿ ೮.೩೦ರ ತನಕ, ಕುಡಾಲು ಎ.ಎಲ್.ಪಿ ಶಾಲೆಯ ೧೨೧ನೇ ಬೂತ್‌ನಲ್ಲಿ ರಾತ್ರಿ ೮ಗಂಟೆ, ಮಂಗಲ್ಪಾಡಿ ಪಂಚಾಯತ್‌ನ ಐಲ ಎ.ಜೆ.ಐ ಶಾಲೆಯ ೮೬ನೇ ಬೂತ್‌ನಲ್ಲಿ ರಾತ್ರಿ ೮ ಗಂಟೆ ಬಳಿಕವೇ ಮತದಾನ ಕೊನೆಗೊಂಡಿರುವುದಾಗಿ ತಿಳಿದುಬಂದಿದೆ.


Share with

Leave a Reply

Your email address will not be published. Required fields are marked *