ಬಂಗ್ರಮಂಜೇಶ್ವರ ಕ್ಷೇತ್ರದಲ್ಲಿ ವರ್ಷಾವಧಿ ಪ್ರತಿಷ್ಟಾ ಮಹೋತ್ಸವ ಸಂಪನ್ನ

Share with

ಮಂಜೇಶ್ವರ: ಬಂಗ್ರಮಂಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ದೇವಸ್ಥಾನದಲ್ಲಿ ವರ್ಷಾವಧಿ ಪ್ರತಿಷ್ಟಾ ಮಹೋತ್ಸವ ಬ್ರಹ್ಮಶ್ರೀ ವೇದಮೂರ್ತಿ ಕೆ.ಉಮೇಶ ತಂತ್ರಿ ಮಂಗಳೂರು ಇವರ ಪ್ರಧಾನ ಆಚಾರ್ಯತ್ವದಲ್ಲಿ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ಬ್ರಹ್ಮಶ್ರೀ ಪ್ರಕಾಶ್ಚಂದ್ರ ಶ್ರೌತಿಯವರ ಪೌರೋಹಿತ್ಯದಲ್ಲಿ  ಕಳೆದ ಮೂರು ದಿನಗಳಿಂದ ನಡೆದೆ ಕಾರ್ಯಕ್ರಮ ಶನಿವಾರ ಸಂಪನ್ನಗೊಂಡಿತು.  ದೇವತಾ ಪ್ರಾರ್ಥನೆ, ತೋರಣ ಪ್ರತಿಷ್ಟೆ, ತಂತ್ರಿವರಣ ಸಹಿತ ವಿವಿಧ ವಧಿಕ ಕಾರ್ಯಕ್ರಮಮ,  ಶ್ರೀ ಮಾತೆಗೆ ಪಂಚಾಮೃತ ಸಹಿತ ೧೦೮ ಸೀಯಾಳ ಅಭಿಷೇಕ, ಕಲಾತತ್ವ ಪ್ರಧಾನ ಹೋಮಾದಿಗಳು, ಪೂರ್ಣಾಹುತಿ, ಕುಂಭಾಭಿಷೇಕ, ಅಲಂಕಾರ, ಮಹಾಪೂಜೆ, ಪಲ್ಲಪೂಜೆ,  ಶ್ರೀ ದೇವರ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ,   ಕೆ.ಯಂ. ಗುರುಕಿರಣ್ ಆಚಾರ್ಯ ಕೆರೆಮನೆ ಕಾಸರಗೋಡು ಇವರಿಂದ ವೇಣುವಾದನ,  ಮಡಿಕೇರಿ ಕೇಶವ ಆಚಾರ್ಯ ಇವರಿಂದ ಕೊಳಲು ವಾದನ  ಸಂಗೀತ ಕಾರ್ಯಕ್ರಮ, ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳವರಿಗೆ ಪೂರ್ಣಕುಂಭ ಸ್ವಾಗತ, ಆಶೀರ್ವಚನ,  ರಂಗಪೂಜೆ, ಗುಳಿಗ ದೈವಕ್ಕೆ ತಂಬಿಲ, ಪಲ್ಲಕ್ಕಿ ಉತ್ಸವ, ಶ್ರೀ ಆದಿಕ್ಷೇತ್ರಕ್ಕೆ ಭೇಟಿ, ಅಷ್ಟಾವಧಾನ, ಅವಭೃತ [ಓಕುಳಿ], ಶ್ರೀ ದೇವರ ಆಲಯ ಪ್ರವೇಶ, ಬ್ರಹ್ಮಾರ್ಪಣೆ, ಫಲ ಮಂತ್ರಾಕ್ಷತೆ, ಸಂಪ್ರೋಕ್ಷಣೆಯೊಂದಿಗೆ ಇಂದು ಉತ್ಸವ ಸಮಾಪ್ತಿಗೊಂಡಿತು. ಉತ್ಸವದ ದಿನಗಳಲ್ಲಿ ಓಜ ಸಾಹಿತ್ಯ ಕೂಟ ಹಾಗೂ ಶ್ರೀ ಕಾಳಿಕಾಪರಮೇಶ್ವರೀ ವಿಶ್ವಕರ್ಮ ಮಹಿಳಾ ಸಂಘದ ವತಿಯಿಂದ  ಭಜನಾ ಕಾರ್ಯಕ್ರಮ ಹಾಗೂ ದೇವೀ ಪಾರಾಯಣವು ನಡೆಯಿತು.


Share with

Leave a Reply

Your email address will not be published. Required fields are marked *