ಯುವ ಭಾರತಿಯ ಸೇವಾ ಸಮಿತಿಯ ಮಹತ್ವಾಕಾಂಕ್ಷೆಯ ಸೇವಾ ಯೋಜನೆ ನೂತನ ಮನೆ ಗ್ರೃಹಪ್ರವೇಶ ಭಜನಾ ಸತ್ಸಂಗ,ಧಾರ್ಮಿಕ ಸಭೆ

Share with

ಬಾಯಿಕಟ್ಟೆ : ಯುವಭಾರತಿ ಸೇವಾ ಸಮಿತಿ ಉಪ್ಪಳ ಇದರ ವತಿಯಿಂದ ಬಾಯಿಕಟ್ಟೆಯಲ್ಲಿ ಸೇವಾ ರೂಪದಲ್ಲಿ ನಿರ್ಮಿಸಲಾದ 3ನೇ ಮನೆ “ಯುವಭಾರತಿ” ಎಂಬ ನಾಮಾಂಕಿತ ಮನೆಯ ಗ್ರೃಹಪ್ರವೇಶ,ಮನೆ ಭಜನೆ ,ಧಾರ್ಮಿಕ ಸತ್ಸಂಗ ಕಾರ್ಯಕ್ರಮ 02.05.2024 ಗುರುವಾರರಂದು ನಡೆಯಿತು. ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಇವರು ಆಶೀರ್ವಚನ ನೀಡಿದರು . ಯುವಭಾರತಿಯ ಗೌರವ ಅಧ್ಯಕ್ಷರು ಶ್ರೀ ಹರಿನಾಥ ಭಂಡಾರಿ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡರು. ಉದ್ಯಮಿ ಶ್ರೀ ವಿಠ್ಠಲ್ ಭಂಡಾರಿ ಮುಳಿಂಜ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಸಂಧ್ಯಾ ಇವರು ಗೌರವ ಉಪಸ್ಥಿತರಿದ್ದರು . ಧಾರ್ಮಿಕ ಮುಂದಾಳು ಶ್ರೀ ವಿಜಯ ಪಂಡಿತ್, ರಾಷ್ಟ್ರೀಯ ಸ್ವಯಂಸೇವಕ ಸಂಘ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಶ್ರೀ ಸುಕುಮಾರ್ ಬಾಯಾರು.
ವಾಸ್ತು ತಜ್ನರಾದ ಶ್ರೀ ಸುನೀಲ್ ವೈಶಾಖ್, ಯುವಭಾರತಿ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಮುಟ್ಟಂ ಉಪಸ್ಥಿತರಿದ್ದರು. ಇದೇ ಸಂಧರ್ಭದಲ್ಲಿ ನೂತನ ಮನೆಯಲ್ಲಿ 57 ನೇ ತಿಂಗಳ 57 ನೇ ಮನೆ ಭಜನೆ ನಡೆಯಿತು.ಭಜನಾ ಸೇವೆಯನ್ನು ಶ್ರೀಕ್ರೃಷ್ಣ ಭಜನಾ ಸಂಘ ಕ್ರೃಷ್ಣನಗರ ಮಂಗಲ್ಪಾಡಿ ಇವರು ನಡೆಸಿಕೊಟ್ಟರು ಭಜನೆಯಲ್ಲಿ ಪೂಜಿತಗೊಂಡ ಭಾರತ ಮಾತೆ ಭಾವಚಿತ್ರವನ್ನು ಶ್ರೀ ಸುಕುಮಾರ್ ಬಾಯಾರು ಮನೆಯವರಿಗೆ ಹಸ್ತಾಂತರಿಸಿದರು. ಭಜನಾ ತಾಳವನ್ನು ಶ್ರೀ ಹರಿನಾಥ ಭಂಡಾರಿ, ಅದೇ ರೀತಿ ಭಗವದ್ಗೀತೆ ಸಾಹಿತ್ಯವನ್ನು ಶ್ರೀ ವಿಠ್ಠಲ್ ಭಂಡಾರಿ ಮನೆಯವರಿಗೆ ಹಸ್ತಾಂತರಿಸಿದರು. ಭಜನೆಯಲ್ಲಿ ಪೂಜಿತಗೊಂಡ ಫಲವಸ್ತು,ಹಣ್ಣುಕಾಯಿಯನ್ನು ಶ್ರೀ ವಿಜಯ ಪಂಡಿತ್ ಮನೆಯವರಿಗೆ ಹಸ್ತಾಂತರಿಸಿದರು. ಇದೇ ಸಂಧರ್ಭದಲ್ಲಿ ಶ್ರೀ ವಿಠ್ಠಲ್ ಭಂಡಾರಿಯವರು ಕೊಂಡೆವೂರು ಶ್ರೀಗಳಿಗೆ ಸಾಹಿತ್ಯವನ್ನು ಕಾಣಿಕೆಯಾಗಿ ನೀಡಿದರು. ಶ್ರೀ ಸುದರ್ಶನ್ ಧನ್ಯವಾದ ಸಲ್ಲಿಸಿದರು. ಶ್ರೀ ಜಗದೀಶ ಪ್ರತಾಪನಗರ ಕಾರ್ಯಕ್ರಮ ನಿರೂಪಿಸಿದರು ಯುವಭಾರತಿ ಸಂಸ್ಥೆಯ ಕಾರ್ಯದರ್ಶಿ ಅಶೋಕ್ ಬಂದ್ಯೋಡು ಸ್ವಾಗತಿಸಿದರು.ಗ್ರೃಹಪ್ರವೇಶ ಸಮಾರಂಭದಲ್ಲಿ ಮನೆಯವರು,ಬಂಧುಮಿತ್ರರು,ಯುವ ಭಾರತಿಯ ಸದಸ್ಯರು ಉಪಸ್ಥಿತರಿದ್ದರು


Share with

Leave a Reply

Your email address will not be published. Required fields are marked *