ಉಪ್ಪಳ: ಮಂಗಲ್ಪಾಡಿ ಪ್ರತಾಪನಗರ ನಿವಾಸಿ ರಾಮ ಶೆಟ್ಟಿಗಾರ್ [62] ನಾಪತ್ತೆಯಾಗಿದ್ದಾರೆ. ಶಿಲಾನ್ಯಾಸ ನಡೆಸುತ್ತಿರುವ ಇವರು ಅಯೋಧ್ಯೆ ಕರಸೇವಕ, ಹಿರಿಯ ಆರ್‌ಎಸ್‌ಎಸ್ ಕಾರ್ಯಕರ್ತ. ಇದೇ 3ರಂದು ಬೆಳಗ್ಗೆ 11 ಗಂಟೆಗೆ ಮನೆಯಿಂದ ಹೊರಗೆ ಹೋದವರು ವಾಪಸ್ ಬಾರದೆ ನಾಪತ್ತೆಯಾಗಿದ್ದಾರೆ. ಮೊಬೈಲನ್ನು ಮನೆಯಲ್ಲೇ ಇಟ್ಟು, ಉಟ್ಟ ಬಟ್ಟೆಯಲ್ಲಿ ತೆರಳಿದ್ದಾರೆ. ಸಂಬoಧಿಕರ ಸಹಿತ ವಿವಿಧ ಕಡೆ ಹುಡುಕಾಡಿದರೂ ಪತ್ತೆಯಾಗಲಿಲ್ಲವೆಂದು ಮನೆಯವರು ತಿಳಿಸಿದ್ದಾರೆ. ಈ ಬಗ್ಗೆ ಕುಂಬಳೆ ಪೋಲೀಸರಿಗೂ ದೂರು ನೀಡಲಾಗಿದೆ. ಇವರನ್ನು ಎಲ್ಲಿಯಾದರೂ ಕಂಡುಬoದಲ್ಲಿ 9847848277, 8281652432 ಈ ಪೋನ್ ನಂಬರ್‌ಗೆ ಕರೆ ಮಾಡಲು ಮನೆಯವರು ವಿನಂತಿಸಿದ್ದಾರೆ.