ಮಂಜೇಶ್ವರ: ಹೊಸಂಗಡಿ ರೈಲ್ವೇ ಗೇಟ್ ಪದೇ ಪದೇ ಹಾನಿಗೀಡುತ್ತಿರುವುದರಿಂದ ಬಂಗ್ರಮಂಜೇಶ್ವರ ಸಹಿತ ವಿವಿಧ ಪ್ರದೇಶಗಳಿಗೆ ತೆರಳಬೇಕಾದವರು ಸಮಸ್ಯೆಗೀಡಾಗುತ್ತಿದ್ದಾರೆ. ಬುಧವಾರ ಬೆಳಿಗ್ಗೆ ಕೂಡಾ ಗೇಟ್ ಜಾಮ್ ಆಗಿದ್ದು, ಗಂಟೆಗಳ ಬಳಿಕ ತೆರೆಯಲಾಗಿದೆ ಎಂದು ನಾಗರಿಕರು ತಿಳಿಸಿದ್ದಾರೆ. ಹಳೇಯ ಗೇಟ್ ಬಳಿಯಲ್ಲಿಯೇ ಸ್ವಿಚ್ ಮೂಲಕ ಹಾಕುವ ವ್ಯವಸ್ಥೆ ಹೊಂದಿರುವ ಹೊಸ ಗೇಟ್‌ನ್ನು ಸ್ಥಾಪಿಸಲಾಗಿದ್ದರೂ ಅದರ ಚಾಲನೆ ಇನ್ನೂ ನಡೆದಿಲ್ಲ. ಹಲವು ವರ್ಷಗಳಿಂದಲೂ ಗೇಟ್ ಪದೇ ಪದೇ ಹಾನಿಗೀಡಾಗುತ್ತಿದೆ. ರೈಲು ಹಾದುಹೋಗುವ ವೇಳೆ ಹಾಕಿದರೆ ಮತ್ತೆ ತೆರೆಯಲು ಸಾಧ್ಯವಾಗದೆ ಬಾಕಿಯಾಗುತ್ತಿರುವುದು ವಾಡಿಕೆಯಾಗಿದೆ. ಇದರಿಂದ ಬಸ್ ಸಹಿತ ಇತರ ವಾಹಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಸ್ವಿಚ್ ಮೂಲಕ ಕಾರ್ಯಾಚರಿಸುವ ಹೊಸ ಗೇಟ್‌ಸ್ಥಾಪಿಸಲಾಗಿದ್ದರೂ, ಅದರ ಸಣ್ಣಪುಟ್ಟ ಕೆಲಸಗಳು ಬಾಕಿಯಿರುವುದರಿಂದ ಇನ್ನೂ ಚಾಲನೆಗೊಳಿಸಲು ವಿಳಂಬಗೊಳ್ಳುತ್ತಿದೆ. ಹೊಸಗೇಟ್‌ನ್ನು ಕೂಡಲೇ ಚಾಲನೆಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.