
ಮಂಗಳೂರು : ಇಂದು ಸ್ವರ್ಗಸ್ಥರಾದ ಇತಿಹಾಸ ಪ್ರಸಿದ್ಧ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರು,ಪ್ರಸ್ತುತ ಮೊಕ್ತೇಸರರು, ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರು,ಹಲವು ಜಿಲ್ಲೆಗಳಲ್ಲಿ ವಿಭಾಗೀಯ ಅರಣ್ಯಾಧಿಕಾರಿಯಾಗಿಯೂ (DFO) , ಕರ್ನಾಟಕ ಸರಕಾರದ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದ ನಿವೃತ್ತ ಐ.ಎಫ್.ಎಸ್ ಅಧಿಕಾರಿ ಉಳಿಪ್ಪಾಡಿಗುತ್ತು ಶ್ರೀ ತಾರನಾಥ ಆಳ್ವರವರವರ ಪಾರ್ಥಿವ ಶರೀರದ ಅಂತಿಮದರ್ಶನ ನಾಳೆ ಆದಿತ್ಯವಾರ ಬೆಳಿಗ್ಗೆ 9.30ರಿಂದ 11.00ರವರೆಗೆ ಕದ್ರಿಕಂಬಳದ ಮನೆಯಲ್ಲಿ ನಡೆಯಲಿದ್ದು,ಬಳಿಕ ಮಧ್ಯಾಹ್ನ 12.00ಕ್ಕೆ ಗಂಜಿಮಠದ ಒಡ್ಡೂರು ಫಾರ್ಮ್ಸ್ ನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.