ಕಾಸರಗೋಡು : ಅಸಾಧ್ಯವಾಗದ ವಿಭಿನ್ನ ರೀತಿಯಲ್ಲಿ ಒಂದು ಅಕ್ಕಿಕಾಳಿನ ಗಾತ್ರದ ವಸ್ತುವಿನಿಂದ ಪ್ರಾರಂಭಗೊಂಡು ಬೇರೆ ಬೇರೆ ಪರಿಕರಗಳನ್ನು ಉಪಯೋಗಿಸಿ ಕಲೆಯಿಂದ ಏನಾದರೂ ಸಾಧಿಸಿ ಸಮಾಜಕ್ಕೆ ಅರ್ಪಿಸಬೇಕು ಎಂದು ಕನಸು ಹೊತ್ತು ಸಾಗುತ್ತಿರುವ ಸೂಕ್ಷ್ಮ ವಸ್ತುಗಳ ಮೈಕ್ರೋ ಆರ್ಟಿಸ್ಟ್ ಎಂದೇ ಚಿರಪರಚಿತ ರಾಗಿರುವವರು ವೆಂಕಟೇಶ್ ಆಚಾರ್ಯ.
ಇವರು ಮೂಲತಃ ಗಡಿನಾಡು ಕಾಸರಗೋಡು ಜಿಲ್ಲೆಯಮುಳ್ಳೇರಿಯಾ ಸಮೀಪದ ತಲೆಬೈಲು ನಿವಾಸಿ ಸುಬ್ರಾಯ ಆಚಾರ್ಯ-ಶಾರದಾ ದಂಪತಿಯ ಪುತ್ರ ಸೂಕ್ಷ್ಮಾತಿ ಸೂಕ್ಷ್ಮ ವಸ್ತುಗಳಿಂದ ಇಂದು ಎಲ್ಲೆಡೆ ಮಾತಾಗಿರುವ ಕಲಾವಿದ ವೆಂಕಟೇಶ್ ಆಚಾರ್ಯ.
ಇವರ ಸಾಧನೆ ಸಮಾಜಕ್ಕೆ ಸಂದೇಶ ಸಾರುವ ಕಲೆಗಳು ಸಾಸಿವೆ ಕಾಳಿಗಿಂತ ಸಣ್ಣ ಭಾರತ ತಿವರ್ಣ ಧ್ವಜ 🇮🇳 ಹತ್ತು ಮಿಲ್ಲಿ ಚಿನ್ನದಲ್ಲಿ ಸ್ವಚ್ಛ ಭಾರತ್ ಲಾಂಛನ ಒಂದು ಅಕ್ಕಿ ಕಾಲಿನಲ್ಲಿ 36 ಅಕ್ಷರ ಒಂದು ಪೋಸ್ಟ್ ಕಾರ್ಡ್ ನಲ್ಲಿ 6524 ಬಾರಿ ಓಂ ನಮಃ ಶಿವಾಯ ಬೆಂಕಿ ಕಡ್ಡಿ ತುದಿಯಲ್ಲಿ ಶಬರಿಮಲೆ ಸನ್ನಿದಾನ ನವದಾನ್ಯಗಳಿಂದ ಅಯ್ಯೋದ್ಯಾ ರಾಮಮಂದಿರ ಇವರ ಸಾಧನೆ ಒಂದಲ್ಲ ಎರಡಲ್ಲ ಹಲವಾರು ಸಾಧನೆಯ ಸರದಾರ.
2015 ರಲ್ಲಿ ಹಿಂದೂಸ್ತಾನ್ ವಾಟ್ಸಾಪ್ ಗ್ರೂಪ್‌ನ್ನು ಸ್ಥಾಪಿಸಿ ಅದರ ಮೂಲಕ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡವರು, ಇವರ ಸಾಧನೆ ಕಂಡು ಕೇರಳ ವಿಧಾನ ಸಭೆಯಲ್ಲಿ ಮಂಜೇಶ್ವರ ಶಾಸಕರು ಉಲ್ಲೇಖ ಮಾಡಿದರೆ. ಹಲವಾರು ಸಂಘ ಸಂಸ್ಥೆ ಮಠ ಮಂದಿರ
ಸ್ವಾಮಿಜೀಗಳು ಗುರುಗಳು ದಿಗ್ಗಜರು ಇವರನ್ನು ಗೌರವಿಸಿ ಅರಸಿದೆ. ಇವರ ಸಾಧನೆಯನ್ನು ಗುರುತಿಸಿ ಕನ್ನಡ, ತುಳು, ಮಲೆಯಾಳ, ಇಂಗ್ಲಿಷ್, ಹಿಂದಿ ಪತ್ರಿಕಾ ಹಾಗೂ ದೃಶ್ಯ ಮಾಧ್ಯಮದ ಮೂಲಕ ಇವರ ಕಲಾ ವಿಸ್ಮಯತೆ ಬಗ್ಗೆ ವಿಶೇಷ ಸಂದರ್ಶನ ಪ್ರಸಾರಪಡಿಸಿದೆ.
ಮಧ್ಯಮ ಕುಟುಂಬ ವರ್ಗದಲ್ಲಿ ಜನಿಸಿ ತನ್ನ ಕಲಾ ಸಾಧನೆಯ ಮೂಲಕ ಜಗತ್ತಿನ ಕಣ್ಣಂಚನ್ನು ತನ್ನ ಕಲೆಯತ್ತ ಸೆಳೆಯುವಂತಾಗಿಸಿದ ಕಲಾವಿದ ವೆಂಕಟೇಶ್ ಆಚಾರ್ಯರ ಮುಂದಿನ ಇನ್ನಷ್ಟು ಸಾದನೆ ಹಾಗೂ ಭವಿಷ್ಯ ಉಜ್ವಲವಾಗಿರಲೆಂಬ ಶುಭ ಹಾರೈಕೆಗಳು.