ಉಪ್ಪಳ : ಅವೈಜ್ಞಾನಿಕ ಷಟ್ಪಥ ರಸ್ತೆ ಅಂಡರ್ ಪಾಸ್ ಜಲಾವೃತ; ಸುತ್ತಮುತ್ತಲಿನ ಗ್ರಾಮಸ್ಥರ ಪರದಾಟ

Share with

ಮಂಜೇಶ್ವರ: ಉಪ್ಪಳ ಗೇಟ್ ಬಳಿ ನಿರ್ಮಿಸಲಾಗಿರುವ ಅವೈಜ್ಞಾನಿಕ ಅಂಡರ್ ಪಾಸ್ ಒಂದು ಸಣ್ಣ ಮಳೆ ಸುರಿದರೂ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸಿದ ಕಾರಣ ನೀರು ತುಂಬಿ ಜಲಾವೃತವಾಗುತ್ತಿವುದಾಗಿ ಪರಿಸರವಾಸಿಗಳು ಆರೋಪಿಸುತಿದ್ದಾರೆ.

ಬೇಸಿಗೆ ಕಾಲದ ಮೊದಲ ಮಳೆಗೆ ಅಂಡರ್ ಪಾಸಿನಲ್ಲಿ ಪೂರ್ಣವಾಗಿ ನೀರು ಕಟ್ಟಿ ನಿಂತು ಈ ರೀತಿ ಪರದಾಡಬೇಕಾದ ಅವಸ್ಥೆ ಎದುರಾದರೆ ಮಳೆಗಾಲದಲ್ಲಿ ಸುರಿಯುವ ಮಳೆಗೆ ಏನಾಗಬಹುದೆಂಬ ಭಯ ಇಲ್ಲಿಯ ಜನರನ್ನು ಕಾಡುತ್ತಿದೆ.

ರೈಲ್ವೇ ಗೇಟ್ ಗೆ ತಾಗಿಕೊಂಡೇ ನಿರ್ಮಿಸಲಾಗಿರುವ ಈ ಅಂಡರ್ ಪಾಸಿನಲ್ಲಿ ನೀರು ತುಂಬಿದರೆ ವಾಹನ ಸಂಚಾರ ಪೂರ್ಣವಾಗಿಯೂ ಸ್ಥಗಿತಗೊಳ್ಳುವ ಪರಿಸ್ಥಿತಿ ಎದುರಾಗುತ್ತಿದೆ.

ಮಳೆ ಬಂದು ಜಲಾವೃತಗೊಂಡಾಗ ಸುತ್ತಮುತ್ತಲಿನ ಗ್ರಾಮಸ್ಥರು ಅಂಡರ್ ಪಾಸ್​ನಲ್ಲಿ ಹರಸಾಹಸಪಟ್ಟು ಸಂಚರಿಸುವಂತಾಗಿದ್ದು, ಯು ಎಲ್ ಸಿ ಸಿ ಇಂಜಿನಿಯರುಗಳಿಗೆ ಹಿಡಿಶಾಪ ಹಾಕುತಿದ್ದಾರೆ. ಸಾಮಾನ್ಯವಾಗಿ ಮಳೆ ಬಂದ್ರೆ ಎಲ್ಲರೂ ಖುಷಿಪಡ್ತಾರೆ. ಅದ್ರೆ ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ಉಪ್ಪಳ ಗೇಟ್ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಪಡುವಂತಾಗಿದೆ.

ಸಣ್ಣ ಮಳೆ ಬಂದರೂ ಸಾಕು ಅಂಡರ್ ಪಾಸ್ ಜಲಾವೃತವಾಗುತ್ತದೆ. ನೀರು ನಿಂತು ರಸ್ತೆ ಕೆರೆಯಂತಾಗುತ್ತದೆ. ಹರಸಾಹಸಪಟ್ಟು ಕಾರು ಮತ್ತು ಬೈಕ್ ಸವಾರರು ಮಳೆ ನೀರಿನಲ್ಲಿ ಹರಸಾಹಸಪಟ್ಟು ಸಾಗಬೇಕಿದೆ.

ಸುತ್ತಮುತ್ತಲಿನ ಪ್ರದೇಶದಿಂದ ಹರಿದು ಬರುವ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸದೇ ಅಂಡರ್ ಪಾಸ್ ನಿರ್ಮಾಣ ಮಾಡಿರುವುದಾಗಿ ಸ್ಥಳೀಯರು ಹೇಳುತಿದ್ದಾರೆ.


Share with

Leave a Reply

Your email address will not be published. Required fields are marked *