ಮoಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಜೇಶ್ವರ ಇದರ ತೂಮಿನಾಡಿನಲ್ಲಿ ನೂತನವಾಗಿ ನಿರ್ಮಿಸಿದ ಕಟ್ಟಡದಲ್ಲಿ ಪ್ರಧಾನ ಕಚೇರಿಯ ಉದ್ಘಾಟನಾ ಸಮಾರಂಭ ಮೇ 26 ರಂದು ಬೆಳಿಗ್ಗೆ 10.30 ರಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಮಂಗಳೂರು ಕುಲಶೇಖರ ಶ್ರೀ ವೀರನಾರಾಯಣ ಕ್ಷೇತ್ರದ ಆಡಳಿತ ಮೊಕ್ತೇಸರ ಪುರುಶೋತ್ತಮ ಕುಲಾಲ್ ಕಲ್ಟಾವಿ ದೀಪ ಪ್ರಜ್ವಲನೆಗೊಳಿಸುವ ಮೂಲಕ ಉದ್ಘಾಟಿಸುವರು. ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷರು, ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ ಅಧ್ಯಕ್ಷತೆ ವಹಿಸುವರು. ಮಂಗಳೂರು ಉದ್ಯಮಿ ವಿಠಲ ಕುಲಾಲ್, ಕುಲಾಲ್ ಸಂಘದ ಮುಡಿಪು ಘಟಕದ ಅಧ್ಯಕ್ಷ ಪುಂಡರೀಕಾಕ್ಷ ಕೈರಂಗಳ, ಮಂಗಳೂರು ಉದ್ಯಮಿ ನರಸಿಂಹ ಕುಲಾಲ್ ಕಡಂಬಾರು, ಕುಂಜತ್ತೂರು ಅಡ್ಕ ಕುಲಾಲ ಬಂಗೇರ ಮೂಲಸ್ಥಾನದ ಮೂಲ್ಯಣ್ಣ ಹರೀಶ್ ಬಂಗೇರ, ಲೀಲಾವತಿ ಟೀಚರ್ ಮೊದಲಾದವರು ಉಪಸ್ಥಿತರಿರುವರು. ಬೆಳಿಗ್ಗೆ 9.30 ರಿಂದ 10.30ರ ತನಕ ಭಜನೆ, ಸಮಾಜದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮೊದಲಾದ ಕಾರ್ಯಕ್ರಮ ನಡೆಯಲಿದೆ.