ವಿವಿಧ ಕಡೆಗಳಲ್ಲಿ ದುರ್ವಾಸನೆ ಬೀರುತ್ತಿರುವ ತ್ಯಾಜ್ಯ ರಾಶಿ: ಶುಚೀಕರಣಕ್ಕೆ ಒತ್ತಾಯ

Share with

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ವಿವಿಧ ಪ್ರದೇಶದ ಒಳರಸ್ತೆಗಳಲ್ಲಿ ತ್ಯಾಜ್ಯ ರಾಶಿ ದುರ್ವಾಸನೆಯಿಂದ ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆಯಾಗಿದ್ದು, ಶುಚೀಕರಣಕ್ಕೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಮಳೆ ಗಾಲದ ಪೂರ್ವಭಾವಿ ಶುಚೀಕರಣ ಕೆಲವು ವಾರ್ಡ್ ಗಳಲ್ಲಿ ಆರಂಭಗೊಂಡಿದ್ದರೂ ಮಣ್ಣಂಗಳು ಮೈದಾನ ಪರಿಸರದ ವಿವಿಧ ರಸ್ತೆಗಳಲ್ಲಿ , ನಯಬಜಾರ್-ಸೋಂಕಾಲು ರಸ್ತೆ ಸಹಿತ ವಿವಿಧ ಕಡೇಗಳಲ್ಲಿ ಮಳೆಗೆ ಒದ್ದೆಯಾದ ತ್ಯಾಜ್ಯ ರಾಶಿ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ದೂರಲಾಗಿದೆ. ಈ ಪೈಕಿ ಮಣ್ಣಂಗುಳಿ ಮೈದಾನದ ಪರಿಸರ ರಸ್ತೆಗಳಲ್ಲಿ ಭಾರೀ ಪ್ರಮಾಣದ ತ್ಯಾಜ್ಯ ರಾಶಿ ಸ್ಥಳೀಯರ ಹಾಗೂ ವಾಹನ ಸವಾರರಲ್ಲಿ ಆತಂಕವನ್ನುಂಟುಮಾಡಿದೆ. ಇಲ್ಲಿನ ತ್ಯಾಜ್ಯವನ್ನು ಹಲವು ಬಾರಿ ಸ್ಥಳೀಯ ವ್ಯಾಪಾರಿ ಹಾಗೂ ವಾರ್ಡ್ ಸದಸ್ಯನ ನೇತೃತ್ವದಲ್ಲಿ ಶುಚೀಕರಿಸಿದರೂ ಮತೆ ಮತ್ತೆ ತ್ಯಾಜ್ಯವನ್ನು ರಾತ್ರಿ ಹೊತ್ತಲ್ಲಿ ಸುರಿಯುತ್ತಿರುವುದು ಸಮಸ್ಯೆಯಾಗಿದೆ. ಈ ಪರಿಸರದಲ್ಲಿ ವ್ಯಾಪಾರ ಸಂಸ್ಥೆ, ಅಂಗನವಾಡಿ, ಶಾಲೆ, ಹಲವಾರು ಮನೆಗಳು ಹೊಂದಿರುವ ಪ್ರದೇಶವಾಗಿದೆ. ಈ ತ್ಯಾಜ್ಯದಿಂದ ಸಾಂಕ್ರಾಮಿಕ ರೋಗ ತಗಲುವ ಆತಂಕ ಸ್ಥಳೀಯರನ್ನು ಕಾಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಶುಚೀಕರಣಕ್ಕೆ ಕ್ರಮಕೈಗೊಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


Share with

Leave a Reply

Your email address will not be published. Required fields are marked *