ಮಂಜೇಶ್ವರ :ಮೋದಿ ಮತ್ತೆ ಪ್ರಧಾನಿ ಆಗೋದು ಶತ ಸಿದ್ದ, ಈ ಬಾರಿ ಕೇರಳದಲ್ಲಿಯೂ ತಾವರೆ ಅರಳುತ್ತದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶ ತಂತ್ರಿ ಕುಂಟರು ಹೇಳಿದರು.ಹೊಸಂಗಡಿ ಪ್ರೇರಣಾ ದಲ್ಲಿ ಜರಗಿದ ಬಿಜೆಪಿ ಮಂಜೇಶ್ವರ ಮಂಡಲ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.ಮಂಜೇಶ್ವರ ಮಂಡಲ ಅಧ್ಯಕ್ಷ ಆರ್ಶ ಬಿ ಎಂ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಸಂಘಟನಾತ್ಮಕ ಚಟುವಟಿಕೆ ಗಳ ಬಗ್ಗೆ ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೊಸಡ ವಿವರಿಸಿದರು.ಮುಖಂಡರಾದ ಯಾದವ ಬಡಾಜೆ, ವಿಘ್ನಶ್ವರ ಮಾಸ್ಟರ್ ಕೇದುಕೋಡಿ, ಎ.ಕೆ ಕಯ್ಯಾರ್, ಪದ್ಮನಾಭ ರೈ ಮಿಂಜಾ, ದಾಮೋದರ ಮಿಯಾಪದವು, ರಾಜ್ ಕುಮಾರ್ ಅರಿಬೈಲ್, ಚಂದ್ರವತಿ ಶೆಟ್ಟಿ, ವಿನಯ ಭಾಸ್ಕರ್, ನಾರಾಯಣ ತುಂಗಾ, ರಕ್ಷನ್ ಅಡಕಲಾ, ಜನಪ್ರತಿನಿದಿನಗಳು ಉಪಸ್ಥಿತರಿದ್ದರು, ಯತೀರಾಜ್ ಶೆಟ್ಟಿ ಸ್ವಾಗತಿಸಿ, ಕೆ.ವಿ ಭಟ್ ಧನ್ಯವಾದ ನೀಡಿದರು.
ಈ ಸಂರ್ಭ ರವಿಶ ತಂತ್ರಿ ಗಳ ಜನ್ಮದಿನದ ಆಚರಣೆಯು ಪಕ್ಷದ ವತಿಯಿಂದ ಆಚರಿಸಲಾಯಿತು.