ಉಡುಪಿ: ನೈರುತ್ಯ ಪದವೀಧರರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಬೆಂಬಲಿತ ಅಭ್ಯರ್ಥಿ ಕೆ. ರಘುಪತಿ ಭಟ್ ಅವರು ಇಂದು ಮಡಿಕೇರಿಯ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಕಾರ್ಯಕರ್ತರ ಸಭೆ ನಡೆಸಿದರು.
ಜನರಲ್ ಫೀಲ್ಡ್ ಮಾರ್ಷಲ್ ಕೊಡಗಿನ ವರಪುತ್ರ ಕೆ.ಎಂ ಕಾರ್ಯಪ್ಪ, ಜನರಲ್ ಕೆ. ಎಸ್. ತಿಮಯ್ಯ ಹಾಗೂ ಕಾವೇರಿ ಮಾತೆಯ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಕೆ. ರಘುಪತಿ ಭಟ್ ಅವರು, ಪದವೀಧರರ ಬೇಡಿಕೆ ಈಡೇರಿಸಲು ಹಾಗೂ ಶಿಕ್ಷಕರ ಮತ್ತು ಸರ್ಕಾರಿ ನೌಕರರ ಸಮಸ್ಯೆ ಪರಿಹರಿಸಲು ಪರಿಷತ್ತಿನಲ್ಲಿ ಧ್ವನಿಯಾಗಲು ಮೂರು ಬಾರಿ ಶಾಸಕನಾಗಿ ವಿಧಾನ ಸಭೆಯಲ್ಲಿ ಕೆಲಸ ಮಾಡಿ ಕಾರ್ಯಾನುಭವ ಇರುವ ನನ್ನನ್ನು ಬೆಂಬಲಿಸಿ ಹರಸುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ಕೊಡವ ಸಮಾಜದ ಅಧ್ಯಕ್ಷರು, ನಬಾರ್ಡ್ ನಿವೃತ್ತ ಅಧಿಕಾರಿ ಎಂ.ಸಿ. ನಾಣಯ್ಯ, ಬಿಜೆಪಿ ಕಾರ್ಯಕರ್ತರರಾದ ಅಪ್ಪಣ್ಣ , ಚೇತನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.