ಶಂಕರಪುರ: ಹೃದಯಾಘಾತದಿಂದ ಯುವಕ ಮೃತ್ಯು

Share with

ಉಡುಪಿ: ಶಂಕರಪುರ ಸಮೀಪದ ಸರ್ಕಾರಿಗುಡ್ಡೆಯಲ್ಲಿ 18 ವರ್ಷದ ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಮೃತ ಯುವಕನನ್ನು ಸರ್ಕಾರಿಗುಡ್ಡೆ ನಿವಾಸಿ ಕಾರ್ತಿಕ್ ಪೂಜಾರಿ (18) ಎಂದು ಗುರುತಿಸಲಾಗಿದೆ. ಕಾಪು ಮತ್ತು ಕಟಪಾಡಿ ವಲಯದ ಕಟ್ಟಡ ಸಾಮಾಗ್ರಿ ಸಾಗಾಟ ಲಾರಿ, ಟೆಂಪೋ ಮಾಲಕರ ಸಂಘದ ಅಧ್ಯಕ್ಷ, ಸಮಾಜಸೇವಕ ಚಂದ್ರ ಪೂಜಾರಿ ಹಾಗೂ ಕಟಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಶಾಲಿನಿಚಂದ್ರ ದಂಪತಿಗಳ ಪುತ್ರರಾದ ಕಾರ್ತಿಕ್ ಅವರು ಹೃದಯ ಸಂಬಂಧಿ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಇಂದು ಬೆಳಿಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.


Share with

Leave a Reply

Your email address will not be published. Required fields are marked *