ಉಪ್ಪಳ: ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಾನದಲ್ಲಿ ವಿಷ್ಣುಮೂರ್ತಿ ದೈವ ಹಾಗೂ ರಕೇಶ್ವರೀ ದೈವ ನರ್ತಕ ಪ್ರಮೋದ್ ಪಣಿಕ್ಕರ್ರವರಿಗೆ ಬಂಗಾರು ಅರಸರು ವಿಟ್ಲ ಅರಮನೆಯವರಿಂದ ಸನ್ಮಾನ ಪತ್ರ ಮತ್ತು ಪಣಿಕ್ಕರ್ ಎಂಬ ಬಿರುದು ನೀಡಿ ಗೌರವಿಸಲಾಗಿದೆ.
ಇವರು ಕಯ್ಯಾರ್ ಯಂ.ಕೆ. ಚಂದು ವೈದ್ಯರ್ – ಪಾರ್ವತಿ ದಂಪತಿ ಪುತ್ರನಾಗಿ 04-01-1976ರಲ್ಲಿ ಜನಿಸಿದರು. ಬೇಕೂರಿನ ಹಿರಿಯ ಯಕ್ಷಗಾನ ಕಲಾವಿದರಾದ ಕುಂಣಿಕೃಷ್ಣ ಪಣಿಕ್ಕರ್ ಹಾಗೂ ಸಹೋದರರಾದ ದೈವ ಕಲಾಚ್ಚರಾದ ಬೇಕೂರ್ ಕೇಶವ ಪಣಿಕ್ಕರ್ (ಕೇಳು), ಚಂದು ವೈದ್ಯರ್, ಪುತ್ರ ಪ್ರಮೋದ್ ಕುಮಾರ್ 1998ರಿಂದ ಸುಮಾರು 26 ವರ್ಷಗಳ ಕಾಲ ಬಂಬ್ರಾಣದಿಂದ ಹಿಡಿದು ಉಪ್ಪಳ, ಮಂಗಳೂರು, ಉಡುಪಿ, ವಿಟ್ಲ ಪುತ್ತೂರು, ಅಡ್ಯನಡ್ಕ, ಕುಂಬ್ರ ಪ್ರದೇಶಗಳಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಹಾಗೂ ಬಯಲುಕೋಲ, ರಕೇಶ್ವರಿ ಗುಳಿಗ, ಪೊಟ್ಟ ದೈವ, ಅಗ್ನಿ ಗುಳಿಗ ಇತ್ಯಾದಿ ದೈವ ಪಾತ್ರಿ ಅನುಷ್ಠಾನ ಕಲೆಯನ್ನು ನಡೆಸಿಕೊಂಡು ಬಂದಿರುತ್ತಾರೆ.