ಪುತ್ತೂರು: 2023-24ನೇ ಸಾಲಿನಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆದ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಯ ವಿದ್ಯಾರ್ಥಿ ವೇತನಕ್ಕೆ ಕೋಡಿಂಬಾಡಿ ಶಾಂತಿನಗರ ಸರಕಾರಿ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿ ಪವನ್ ಆಯ್ಕೆಯಾಗಿದ್ದಾರೆ. ಮುಂದಿನ ನಾಲ್ಕು ವರ್ಷ ವಿದ್ಯಾರ್ಥಿ ವೇತನ ಪಡೆಯಲು ಅರ್ಹರಾಗಿರುವ ಪವನ್ ಅವರು ಶಾಂತಿನಗರ ನಿವಾಸಿಗಳಾದ ಅಣ್ಣಿ ಪೂಜಾರಿ ಮತ್ತು ತೇಜಾವತಿ ದಂಪತಿಯ ಪುತ್ರ.