ಉಪ್ಪಳ: ಉಪ್ಪಳ ಗೇಟ್ ಬಳಿ ನರ್ಮಿಸಲಾಗಿರುವ ಅಂಡರ್ ಪಾಸ್ ನಲ್ಲಿ ಒಂದು ಸಣ್ಣ ಮಳೆ ಸುರಿದರೂ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸಿದ ಕಾರಣ ನೀರು ತುಂಬಿ ಜಲಾವೃತಗೊಳ್ಳುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. .ಬೇಸಿಗೆ ಕಾಲದ ಮಳೆಗೆ ಅಂಡರ್ಪಾಸ್ ಹಾಗೂ ಸರ್ವೀಸ್ ರಸ್ತೆಯಲ್ಲಿ ಪರ್ಣವಾಗಿ ನೀರು ಕಟ್ಟಿ ನಿಂತು ಸಂಚಾರಕ್ಕೆ ಪರದಾಡಬೇಕಾದ ಅವಸ್ಥೆ ಎದುರಾದರೆ ಮಳೆಗಾಲದಲ್ಲಿ ಸುರಿಯುವ ಮಳೆಗೆ ಏನಾಗಬಹುದೆಂಬ ಭಯ ಇಲ್ಲಿಯ ಜನರನ್ನು ಕಾಡುತ್ತಿದೆ. ರೈಲ್ವೇ ಗೇಟ್ ಗೆ ತಾಗಿಕೊಂಡೇ ನರ್ಮಿಸಲಾಗಿರುವ ಈ ಅಂಡರ್ ಪಾಸಿನಲ್ಲಿ ನೀರು ತುಂಬಿದರೆ ವಾಹನ ಸಂಚಾರ ಪರ್ಣವಾಗಿಯೂ ಸ್ಥಗಿತಗೊಳ್ಳುವ ಪರಿಸ್ಥಿತಿ ಎದುರಾಗುತ್ತಿದೆ. ಮಳೆ ಬಂದು ಜಲಾವೃತಗೊಂಡಾಗ ಸುತ್ತಮುತ್ತಲಿನ ಗ್ರಾಮಸ್ಥರು ಅಂಡರ್ ಪಾಸ್ನಲ್ಲಿ ಹರಸಾಹಸಪಟ್ಟು ಸಂಚರಿಸಬೇಕಾದ ಅವಸ್ಥೆ ಉಂಟಾಗಿದೆ. ಸಣ್ಣ ಮಳೆ ಬಂದರೂ ಸಾಕು ಅಂಡರ್ ಪಾಸ್ ಜಲಾವೃತವಾಗುತ್ತದೆ. ನೀರು ನಿಂತು ರಸ್ತೆ ಕೆರೆಯಂತಾಗುತ್ತದೆ. ಹರಸಾಹಸಪಟ್ಟು ಕಾರು ಮತ್ತು ಬೈಕ್ ಸವಾರರು ಮಳೆ ನೀರಿನಲ್ಲಿ ಹರಸಾಹಸಪಟ್ಟು ಸಾಗಬೇಕಿದೆ. ಸುತ್ತಮುತ್ತಲಿನ ಪ್ರದೇಶದಿಂದ ಹರಿದು ಬರುವ ಮಳೆ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸದೇ ಅಂಡರ್ ಪಾಸ್ ನರ್ಮಾಣ ಮಾಡಿರುವುದಾಗಿ ಸ್ಥಳೀಯರು ದೂರಿದ್ದಾರೆ. ಸಂಬAಧಪಟ್ಟ ಹೆದ್ದಾರಿ ಇಲಾಖೆ ಅಧಿಕಾರಿಗಳು ಕ್ರಮಕೈಗೊಳಬೇಕೆಂದು ಊರವರು ಆಗ್ರಹಿಸಿದ್ದಾರೆ.